ಪಾಕಿಸ್ತಾನಕ್ಕೆ ಭೇಟಿ ನೀಡಿ ವಾಪಾಸು ಬಂದ ಸಂದರ್ಭದಲ್ಲಿ ನಟಿ ರಮ್ಯಾ ಅಲ್ಲಿನ ಜನರ ಬಗ್ಗೆ ಪ್ರಶಂಸನೀಯ ಮಾತುಗಳನ್ನಾಡಿದ್ದರು. ಶತ್ರು ದೇಶವನ್ನು ಮಾಜಿ ಸಂಸದೆ ರಮ್ಯಾ ಹಾಡಿ ಹೊಗಳಿದ್ದಾರೆ ಎಂದು ಆರೋಪಿಸಿ ಕೊಡಗಿನ ವಕೀಲ ವಿಠಲ್ ಗೌಡ ನ್ಯಾಯಾಲಯದಲ್ಲಿ ದೂರನ್ನು ಸಲ್ಲಿಸಿದ್ದರು.
ಮಡಿಕೇರಿ (ಡಿ.29): ಶತ್ರು ರಾಷ್ಟ್ರ ಪಾಕಿಸ್ತಾನದ ಬಗ್ಗೆ ಪ್ರಶಂಸನೀಯ ಮಾತುಗಳನ್ನಾಡಿದ ಹಿನ್ನೆಲೆಯಲ್ಲಿ ಚಿತ್ರನಟಿ ರಮ್ಯಾ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಇಂದು ಸೋಮವಾರಪೇಟೆಯ ಜೆಎಂಎಫ್ಸಿ ನ್ಯಾಯಾಲಯ ವಿಚಾರಣೆ ನಡೆಸಿತು.
ದೂರುದಾರರು ಸಲ್ಲಿಸಿದ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ನ್ಯಾಯಾಲಯವು ವಿಚಾರಣೆಯನ್ನು ಜನವರಿ 27ಕ್ಕೆ ಮುಂದೂಡಿದೆ.
ಪಾಕಿಸ್ತಾನಕ್ಕೆ ಭೇಟಿ ನೀಡಿ ವಾಪಾಸು ಬಂದ ಸಂದರ್ಭದಲ್ಲಿ ನಟಿ ರಮ್ಯಾ ಅಲ್ಲಿನ ಜನರ ಬಗ್ಗೆ ಪ್ರಶಂಸನೀಯ ಮಾತುಗಳನ್ನಾಡಿದ್ದರು. ಶತ್ರು ದೇಶವನ್ನು ಮಾಜಿ ಸಂಸದೆ ರಮ್ಯಾ ಹಾಡಿ ಹೊಗಳಿದ್ದಾರೆ ಎಂದು ಆರೋಪಿಸಿ ಕೊಡಗಿನ ವಕೀಲ ವಿಠಲ್ ಗೌಡ ನ್ಯಾಯಾಲಯದಲ್ಲಿ ದೂರನ್ನು ಸಲ್ಲಿಸಿದ್ದರು.
ದೇಶದ್ರೋಹದ ಹಿನ್ನಲೆಯಲ್ಲಿ ಸಲ್ಲಿಸಿಲಾದ ಖಾಸಗಿ ದೂರಿನ ಹಿನ್ನಲೆಯಲ್ಲಿ ದೂರನ್ನು ಕೈಗೆತ್ತಿಕೊಂಡಿದ್ದ ನ್ಯಾಯಾಲಯ ಕಳೆದ ಬಾರಿ ಸೂಕ್ತ ದಾಖಲೆಗಳನ್ನು ಒದಗಿಸುವಂತೆ ವಕೀಲ ವಿಠಲ್'ರಿಗೆ ಸೂಚಿಸಿತ್ತು.
ಅದರಂತೆ ಅವರು ಇಂದು ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಹಾಗೂ ಪ್ರಸಾರವಾಗಿರುವ ವರದಿಗಳನ್ನು ನ್ಯಾಯಲಾಯಕ್ಕೆ ಒದಗಿಸಿದ್ದಾರೆ.