ಬಿಹಾರದ ರಾಜ್ಯಪಾಲರಾಗಿದ್ದ 71 ವರ್ಷದ ಕೋವಿಂದ್ ಅವರು ಕೆಳಮಟ್ಟದಿಂದ ಉನ್ನತ ಹಂತಕ್ಕೇರಿದ ದಲಿತ ನಾಯಕರಾಗಿದ್ದು ಬಿಜೆಪಿಯಿಂದ ಎಸ್'ಸಿ, ಎಸ್ಟಿ ಮೋರ್ಚಾ ಅಧ್ಯಕ್ಷ,2 ಬಾರಿ ರಾಜ್ಯಸಭಾ ಸದಸ್ಯ ಸೇರಿದಂತೆ ಹಲವು ಹುದ್ದೆಗಳನ್ನು ನಿಭಾಯಿಸಿದ್ದಾರೆ.
ಪಾಟ್ನ(ಜೂ.20): ಆಡಳಿತರೂಢ ಎನ್'ಡಿಎ ಒಕ್ಕೂಟದಿಂದ ಮುಂಬರುವ ರಾಷ್ಟ್ರಪತಿ ಹುದ್ದೆಗೆ ಆಯ್ಕೆಯಾಗಿರುವ ರಾಮ್'ನಾಥ್ ಕೋವಿಂದ್ ಅವರು ಬಿಹಾರ ರಾಜ್ಯಪಾಲ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಕೋವಿಂದ್ ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ' ಎಂದು ರಾಷ್ಟ್ರಪತಿ ಭವನದ ಪ್ರಕಟಣೆ ತಿಳಿಸಿದೆ. ರಾಜೀನಾಮೆಯಿಂದ ತೆರವಾದ ಬಿಹಾರ ರಾಜ್ಯಪಾಲ ಹುದ್ದೆಯನ್ನುಪಶ್ಚಿಮ ಬಂಗಾಳ ರಾಜ್ಯಪಾಲ ಕೇಸರಿ'ನಾಥ್ ತ್ರಿಪಾಠಿ ಹೆಚ್ಚುವರಿಯಾಗಿ ವಹಿಸಿಕೊಂಡಿದ್ದಾರೆ.
ಬಿಹಾರದ ರಾಜ್ಯಪಾಲರಾಗಿದ್ದ 71 ವರ್ಷದ ಕೋವಿಂದ್ ಅವರು ಕೆಳಮಟ್ಟದಿಂದ ಉನ್ನತ ಹಂತಕ್ಕೇರಿದ ದಲಿತ ನಾಯಕರಾಗಿದ್ದು ಬಿಜೆಪಿಯಿಂದ ಎಸ್'ಸಿ, ಎಸ್ಟಿ ಮೋರ್ಚಾ ಅಧ್ಯಕ್ಷ,2 ಬಾರಿ ರಾಜ್ಯಸಭಾ ಸದಸ್ಯ ಸೇರಿದಂತೆ ಹಲವು ಹುದ್ದೆಗಳನ್ನು ನಿಭಾಯಿಸಿದ್ದಾರೆ.
ಪ್ರಸ್ತುತ ರಾಷ್ಟ್ರಪತಿಯಾಗಿರುವ ಪ್ರಣಾಬ್ ಮುಖರ್ಜಿ ಅವರ ಅವಧಿ ಜುಲೈ 24ಕ್ಕೆ ಕೊನೆಗೊಳ್ಳಲಿದ್ದು, ಜುಲೈ 17 ರಂದು ಚುನಾವಣೆ ನಡೆಯಲಿದೆ.