ಹೈದರಾಬಾದ್ (ಜು.29): ಭಾನುವಾರ ನಿಧನರಾದ ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ನಾಯಕ ಜೈಪಾಲ್ ರೆಡ್ಡಿ ಶವಯಾತ್ರೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ನಿರ್ಗಮಿತ ಸ್ಪೀಕರ್ ರಮೇಶ್ ಕುಮಾರ್ ಭಾಗವಹಿಸಿದರು.

"

ಶವಯಾತ್ರೆಯಲ್ಲಿ ಅಗಲಿದ ತಮ್ಮ ಗೆಳೆಯನಿಗೆ ಅವರಿಬ್ಬರು ಹೆಗಲು ಕೊಟ್ಟದ್ದು ವಿಶೇಷವಾಗಿತ್ತು. ರಮೇಶ್ ಕುಮಾರ್ ಮತ್ತು ಜೈಪಾಲ್ ರೆಡ್ಡಿ  ಆತ್ಮೀಯ ಸ್ನೇಹಿತರಾಗಿದ್ದವರು.

4 ಬಾರಿ ಶಾಸಕ, 5 ಬಾರಿ ಸಂಸದ ಹಾಗೂ 2 ಬಾರಿ ರಾಜ್ಯಸಭಾ ಸದಸ್ಯರಾಗಿ ಸುದೀರ್ಘ ರಾಜಕೀಯ ಅನುಭವ ಹೊಂದಿದ್ದ ಜೈಪಾಲ್ ರೆಡ್ಡಿ ಕಾಂಗ್ರೆಸ್‌ನ ಪ್ರಮುಖ ನಾಯಕರಾಗಿ ಗುರುತಿಸಿಕೊಂಡವರು.

ಹೈದರಾಬಾದ್‌ನ ಜ್ಯುಬಿಲಿ ಹಿಲ್ಸ್ ನಿವಾಸದಿಂದ ಆರಂಭವಾದ ಜೈಪಾಲ್ ರೆಡ್ಡಿ ಶವಯಾತ್ರೆ ಪಿ.ವಿ. ಘಾಟ್‌ವರೆಗೆ ಸಾಗಿತು. ಅಲ್ಲಿ ಅಂತಿಮ ವಿಧಿ-ವಿಧಾನಗಳನ್ನು ನೆರವೇರಿಸಲಾಯಿತು.