ಈ ಕುರಿತು ಸ್ಪೀಕರ್ ಅವರಿಗೆ ಪತ್ರ ಬರೆದಿದ್ದು,   2 ಕಡೆ ಇರುವ ಕೆಲವು ತಪ್ಪು ಮಾಹಿತಿಗಳನ್ನು ಸೌಹಾರ್ದಯುತವಾಗಿ ನಿವಾರಿಸಿಕೊಳ್ಳಬೇಕು, ಚಹಾಕೂಟ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.

ಬೆಂಗಳೂರು (ಮಾ.31): ಮಾಧ್ಯಮಗಳ ನಿಯಂತ್ರಣಕ್ಕೆ ಸಂಬಂಧಿಸಿದ ಸದನ ಸಮಿತಿಯ ಅಧ್ಯಕ್ಷನಾಗಲು ಸಚಿವ ರಮೇಶ್ ಕುಮಾರ್ ನಿರಾಕರಿಸಿದ್ದಾರೆ.

ಈ ಕುರಿತು ಸ್ಪೀಕರ್ ಅವರಿಗೆ ಪತ್ರ ಬರೆದಿದ್ದು, 2 ಕಡೆ ಇರುವ ಕೆಲವು ತಪ್ಪು ಮಾಹಿತಿಗಳನ್ನು ಸೌಹಾರ್ದಯುತವಾಗಿ ನಿವಾರಿಸಿಕೊಳ್ಳಬೇಕು, ಚಹಾಕೂಟ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.

ಮಾಧ್ಯಮಗಳಿಗೆ ಸದನ ಕಡಿವಾಣ ಹಾಕಲು ಹೊರಟಿದೆ ಎಂದು ಬಿಂಬಿಸಲಾಗಿದೆ, ಆದುದರಿಂದ ಯಾವುದೇ ಕಾರಣಕ್ಕೂ ಅಂಥಾ ದುಸ್ಸಾಹಸಕ್ಕೆ ಕೈಹಾಕಲ್ಲ ೆಂದು ರಮೇಶ್ ಕುಮಾರ್ ತಮ್ಮ ಅಭಿಪ್ರಾಯವನ್ನು ಸ್ಪೀಕರ್'​ಗೆ ತಿಳಿಸಿದ್ದಾರೆ.

ನಮ್ರತೆ, ಕಳಕಳಿಯಿಂದ ಈ ಮಾತನ್ನು ಹೇಳುತ್ತಿದ್ದೇನೆ ಎಂದು ಸ್ಪೀಕರ್'ಗೆ ಮನವರಿಕೆ ಮಾಡಿರುವ ರಮೇಶ್ ಕುಮಾರ್ ಶೀಘ್ರದಲ್ಲೇ ಪ್ರತಿಕ್ರಿಯೆಯ ನಿರೀಕ್ಷೆಯಲ್ಲಿದ್ದೇನೆ ಎಂದು ಹೇಳಿದ್ದಾರೆ.