ಈ ಇಳಿವಯಸ್ಸಿನಲ್ಲಿ ಅವರಿಗೆ ಇದು ಬೇಕಿತ್ತಾ? ಎಂದು ಪ್ರಶ್ನಿಸಿರುವ ರಮೇಶ್ ಕುಮಾರ್, ಶ್ರೀನಿವಾಸ್​ ಪ್ರಸಾದ್​ ಹೋಗಿರುವುದಾದರೂ ಎಲ್ಲಿಗೆ?  ಉಪಚುನಾವಣೆ ಗೆಲ್ಲುವುದಷ್ಟೇ ಅವರಿಗೆ ಮುಖ್ಯವೇ?   ಅಲ್ಲದೇ, ಆತ್ಮಗೌರವ ಇಲ್ಲದ ಮೇಲೆ ಏನು ಸಿಕ್ಕಿದರು ಏನು ಪ್ರಯೋಜನ? ಎಂದು ಪ್ರಶ್ನಿಸಿದ್ದಾರೆ.

ಬೆಂಗಳೂರು (ಜ.02): ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಬಿಜೆಪಿ ಸೇರ್ಪಡೆಯಾಗಿರುವ ಬಗ್ಗೆ ಆರೋಗ್ಯ ಸಚಿವ ರಮೇಶ್ ಕುಮಾರ್ ವ್ಯಂಗ್ಯವಾಡಿದ್ದಾರೆ. 

ಈ ಇಳಿವಯಸ್ಸಿನಲ್ಲಿ ಅವರಿಗೆ ಇದು ಬೇಕಿತ್ತಾ? ಎಂದು ಪ್ರಶ್ನಿಸಿರುವ ರಮೇಶ್ ಕುಮಾರ್, ಶ್ರೀನಿವಾಸ್​ ಪ್ರಸಾದ್​ ಹೋಗಿರುವುದಾದರೂ ಎಲ್ಲಿಗೆ? ಉಪಚುನಾವಣೆ ಗೆಲ್ಲುವುದಷ್ಟೇ ಅವರಿಗೆ ಮುಖ್ಯವೇ? ಅಲ್ಲದೇ, ಆತ್ಮಗೌರವ ಇಲ್ಲದ ಮೇಲೆ ಏನು ಸಿಕ್ಕಿದರು ಏನು ಪ್ರಯೋಜನ? ಎಂದು ಪ್ರಶ್ನಿಸಿದ್ದಾರೆ.

ಪ್ರಸಾದ್ ಬಗ್ಗೆ ನನಗೆ ಅಪಾರ ಗೌರವ ಇದೆ, ಅಲ್ಲದೇ ಅಸ್ಪೃಶ್ಯತೆಯನ್ನು ಸರಿ ಎನ್ನುವ, ಸನಾತನ ಧರ್ಮ ಪ್ರತಿಪಾದಿಸುವ, ಶ್ರೇಣೀಕೃತ ವ್ಯವಸ್ಥೆ ಇರುವ ಪಕ್ಷಕ್ಕೆ ಹೋಗಿದ್ದಾರೆ, ಆತ್ಮ ಗೌರವ ಕಳೆದುಕೊಂಡರೆ ಪ್ರಪಂಚವೇ ಸಿಕ್ಕಿದರೆ ಪ್ರಯೋಜನವೇನು? ಎಂದು ಕಟುವಾಗಿ ಟೀಕಿಸಿದ್ದಾರೆ.

ಶ್ರೀನಿವಾಸ ಪ್ರಸಾದ್ ಬಿಜೆಪಿಗೆ ಸೇರಿರುವುದರಿಂದ ದಲಿತ ಸಮುದಾಯ ಹಾಗು ನಂಜನಗೂಡು ಕ್ಷೇತ್ರಕ್ಕೆ ಏನಾದರೂ ಪ್ರಯೋಜನವಿದೆಯೇ ಎಂದು ರಮೇಶ್ ಕುಮಾರ್ ಪ್ರಶ್ನಿಸಿದ್ದಾರೆ.