Asianet Suvarna News Asianet Suvarna News

ಹೋಗೋದಾದ್ರೆ ಹೇಳಿಯೇ ಹೋಗುತ್ತೇನೆ : ಜಾರಕಿಹೊಳಿ

ನಾನು ಯಾವುದೇ ರೆಸಾರ್ಟ್ ರಾಜಕಾರಣ ಮಾಡುತ್ತಿಲ್ಲ. ಆದರೂ ಮಾಧ್ಯಮದವರು ಮುಂಬೈಗೆ ತೆರಳಿರುವುದಾಗಿ ನನ್ನ ಹೆಸರನ್ನುತೇಲಿ ಬಿಡುತ್ತಿರುವುದು ಸಮಂಜಸವಲ್ಲ ಎಂದು ಸಚಿವ ರಮೇಶ ಜಾರಕಿಹೊಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Ramesh Jarkiholi Reaction About Resort Politics
Author
Bengaluru, First Published Sep 23, 2018, 11:29 AM IST
  • Facebook
  • Twitter
  • Whatsapp

ಗೋಕಾಕ: ನಾನು ಯಾವುದೇ ರೆಸಾರ್ಟ್ ರಾಜಕಾರಣ ಮಾಡುತ್ತಿಲ್ಲ. ಆದರೂ ಮಾಧ್ಯಮದವರು ಮುಂಬೈಗೆ ತೆರಳಿರುವುದಾಗಿ ನನ್ನ ಹೆಸರನ್ನು ತೇಲಿ ಬಿಡುತ್ತಿರುವುದು ಸಮಂಜಸವಲ್ಲ ಎಂದು ಸಚಿವ ರಮೇಶ ಜಾರಕಿಹೊಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶನಿವಾರ ತಮ್ಮ ಕಾರ್ಯಾಲಯದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಮಾಧ್ಯಮದವರು ತಪ್ಪು ಸಂದೇಶ ರವಾನಿಸುವುದು ಏಷ್ಟು ಸರಿ ಎಂದು ಪ್ರಶ್ನಿಸಿದರು. 

ಶಾಸಕರು ತಮ್ಮ ವೈಯಕ್ತಿಕ ವಿಷಯವಾಗಿ ಮದುವೆ ಮತ್ತಿತರ ಕಾರ್ಯಕ್ರಮಗಳಿಗೆ ತೆರಳಿದರೇ ತಪ್ಪಾ? ಬೇರೆಡೆ ಪ್ರಯಾಣ ಬೆಳೆಸಿದರೇ ಅದಕ್ಕೆ ಮತ್ತೊಂದು ಅರ್ಥ ಕಲ್ಪಿಸಲಾಗಿದೆ. ಈ ಬಗ್ಗೆ ನಾನು ಯಾವುದೇ ಹೇಳಿಕೆ ನೀಡಲು ಸಿದ್ಧನಿಲ್ಲ ಎಂದರು. 

ಇದೇವೇಳೆ ಮುಂಬೈಗೆ ಹೋಗುವದಾದರೇ ಖಂಡಿತವಾಗಿಯೂ ತಮಗೇ ಹೇಳಿ ಹೋಗುವುದಾಗಿ ಸಚಿವರು ತಿಳಿಸಿದರು.

Follow Us:
Download App:
  • android
  • ios