ವಿಪಕ್ಷ ನಾಯಕರಿಗೆ ಬಾಬಾ ರಾಮ್ ದೇವ್ ಕೊಟ್ಟ ಸಲಹೆ ಏನು?| ಮುಂದಿನ 10-15 ವರ್ಷಗಳ ಕಾಲ ಕಪಾಲಭಾತಿ ಮಾಡುವಂತೆ ಮನವಿ| ಒತ್ತಡ ನಿರ್ವಹಣೆಗೆ ಕಪಾಲಭಾತಿ ಮಾಡುವಂತೆ ರಾಮ್ ದೇವ್ ಸಲಹೆ|  ‘ಮೋದಿ ನಾಯಕತ್ವದಲ್ಲಿ ದೇಶ ಸಾಂಸ್ಕೃತಿಕ ದೌರ್ಜನ್ಯದಿಂದ ಮುಕ್ತಿ ಹೊಂದಲಿದೆ’| ಸಚಿವರು ಜನರ ನಿರೀಕ್ಷೆಯಂತೆ ಕೆಲಸ ಮಾಡಲಿದ್ದಾರೆ ಎಂದ ಯೋಗ ಗುರು|

ನವದೆಹಲಿ(ಜೂ.01): ಪ್ರಧಾನಿ ನರೇಂದ್ರ ಮೋದಿ 2 ನೇ ಅವಧಿಗೆ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ, ಯೋಗ ಗುರು ಬಾಬಾ ರಾಮ್ ದೇವ್ ವಿಪಕ್ಷಗಳಿಗೆ ಸಲಹೆ ನೀಡಿದ್ದಾರೆ.

ಮುಂದಿನ 10-15 ವರ್ಷ ಒತ್ತಡ ನಿರ್ವಹಣೆಗಾಗಿ ವಿಪಕ್ಷಗಳು ಕಪಾಲಭಾತಿ ಯೋಗ ಅಭ್ಯಾಸ ಮಾಡಿದರೆ ಒಳಿತು ಎಂದು ಬಾಬಾ ರಾಮ್ ದೇವ್ ವ್ಯಂಗ್ಯವಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮುಂದಿನ 10-15 ವರ್ಷಗಳಲ್ಲಿ ವಿಪಕ್ಷಗಳ ನಾಯಕರು ಕಪಾಲಭಾತಿ ಮಾಡುತ್ತಾ ಒತ್ತಡ ನಿರ್ವಹಣೆ ಕಡಿಮೆ ಮಾಡಿಕೊಳ್ಳಲಿ ಎಂದು ರಾಮ್ ದೇವ್ ಹೇಳಿದ್ದಾರೆ.

ಮೋದಿ ನಾಯಕತ್ವದಲ್ಲಿ ದೇಶ ಆರ್ಥಿಕ ಮತ್ತು ಸಾಂಸ್ಕೃತಿಕ ದೌರ್ಜನ್ಯದಿಂದ ಸ್ವಾತಂತ್ರ್ಯ ಪಡೆಯಲಿದ್ದು, ಮೋದಿ ಸಂಪುಟದ ಸಚಿವರು ಜನರ ನಿರೀಕ್ಷೆಗಳಿಗೆ ತಕ್ಕಂತೆ ಕೆಲಸ ಮಾಡಲಿದ್ದಾರೆ ಎಂದು ರಾಮ್ ದೇವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.