ಬಳ್ಳಾರಿ (ಡಿ.12): ಐತಿಹಾಸಿಕ ದೇವಸ್ಥಾನ ಕುಮಾರಸ್ವಾಮಿ ತಂಟೆಗೆ ಹೋದ್ರೆ ಹುಷಾರ್ ಎಂದು ಸಿಎಂ ಸಿದ್ದರಾಮಯ್ಯಗೆ  ರಂಭಾಪುರಿ ಜಗದ್ಗುರು ಶಿವಾಚಾರ್ಯ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.

ಗಣಿ ಧಣಿ ಜನಾರ್ದನ ರೆಡ್ಡಿ ಸುಂಕಲಮ್ಮ ದೇವಸ್ಥಾನ ಉರುಳಿಸಿದ ಶಾಪ ಗೊತ್ತಲ್ಲ. ಸಿದ್ದರಾಮಯ್ಯನವರೇ ಕುಮಾರಸ್ವಾಮಿ ದೇವಸ್ಥಾನ ತಂಟೆಗೆ ಹೋದ್ರೆ ಎಚ್ಚರ. ನೀವು ದುಡ್ಡು ಮಾಡಲು ಬೇಕಾದರೆ  ಬೇರೆ ದಾರಿ ನೋಡಿಕೊಳ್ಳಿ.   ಕುಮಾರಸ್ವಾಮಿ ದೇವಸ್ಥಾನ ಸುತ್ತಮುತ್ತಲು ಗಣಿಗಾರಿಕೆಗೆ ಅನುಮತಿ ನೀಡಿದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಶಾಪ ತಟ್ಟೋದು ಗ್ಯಾರಂಟಿ. ಎಂದು ಬಳ್ಳಾರಿಯಲ್ಲಿ ರಂಭಾಪುರಿ ಜಗದ್ಗುರು ಶಿವಾಚಾರ್ಯ ಸ್ವಾಮಿಜಿ ಎಚ್ಚರಿಕೆ ನೀಡಿದ್ದಾರೆ.