ವಿಜಯಪುರ (ನ.19):  ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರವಾಗಿ ರಂಭಾಪುರಿ ಶ್ರೀಗಳು ಪ್ರತಿಕ್ರಿಯೆ ನೀಡಿದ್ದಾರೆ.  

ತಿಳುವಳಿಕೆ ಇಲ್ಲದ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಹೇಳಿದ ಮಾತ್ರಕ್ಕೆ ಪ್ರತ್ಯೇಕ ಲಿಂಗಾಯತ ಧಮ೯ ಆಗಲ್ಲ. ನಾವು ಕೂಡ ವೀರಶೈವ ಬಗೆಗಿನ ದಾಖಲೆಗಳನ್ನು ಕೋರ್ಟ್ ಗೆ ಸಲ್ಲಿಸುತ್ತೇವೆ. ಲಿಂಗಾಯತ ಪ್ರತ್ಯೇಕ ಧರ್ಮ ಹುಟ್ಟು ಹಾಕುವುದಕ್ಕೆ ಕೈ ಹಾಕಿದ್ದು ಸರಿಯಲ್ಲ ಇನ್ನು ಕೆಲವರು ಬಸವಣ್ಣ ಹೆಸರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ರಂಭಾಪುರಿ ಶ್ರೀಗಳು ಹೇಳಿದ್ದಾರೆ.

ಬಸವಣ್ಣನ ಹೆಸರಿನಲ್ಲಿ ವೀರಶೈವ ಬೇರೆ, ಲಿಂಗಾಯತ ಬೇರೆ ಎಂದು ಹೇಳಿ ಬಸವಣ್ಣ ಅಭಿಪ್ರಾಯಗಳ ವಿರೋಧ ದಿಕ್ಕಿನಲ್ಲಿ ನಡೆದುಕೊಳ್ಳುತ್ತಿದ್ದಾರೆ. ಲಿಂಗಾಯತರು ವೀರಶೈವದ ಕುರಿತು ಜನರಲ್ಲಿ ತಪ್ಪು ಅಭಿಪ್ರಾಯ ಮೂಡಿಸುತ್ತಿದ್ದಾರೆ. ಸಚಿವರುಗಳಲ್ಲಿ ರಾಜಕೀಯ ಅಧಿಕಾರ ಹಾಗೂ ಹಣವಿಲ್ಲದೇ ಹೀಗಾಗಿ ಅವರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಕಾವಿ ಬಟ್ಟೆ ಹಾಕಿಕೊಂಡವರು ಕಾವಿ ಬಗ್ಗೆ ಗೌರವ ಉಳಿಸಿ ಬೆಳೆಸಬೇಕು. ಇತ್ತೀಚೆಗೆ ಕೆಲವು  ಸ್ವಾಮೀಜಿಯವರು ವ್ಯಕ್ತಿತ್ವಕ್ಕೆ ಕಳಂಕ ತರುತ್ತಿದ್ದಾರೆ ಎಂದು ಪರೋಕ್ಷವಾಗಿ ಜಯ ಮೃತ್ಯುಂಜಯ ಸ್ವಾಮಿಜಿ ಕಾಲೆಳೆದರು.  ಕೆಲವು ಸ್ವಾಮಿಯವರು  ಬೆಳೆದು ಬಂದ ಪರಿಸರ, ಸಂಸ್ಕಾರವನ್ನು ತೋರಿಸುತ್ತದೆ ಎಂದು ರಂಭಾಪುರಿ ಶ್ರೀಗಳು ಹೇಳಿದ್ದಾರೆ.