ಆ ದಂಪತಿಗೆ ಆಗಲೇ 2 ಗಂಡು ಮಕ್ಕಳಿಗೆ ಜನ್ಮವನ್ನ ಕೊಟ್ಟಿದ್ದರು. ಈ ಆಧುನಿಕ ಕಾಲದಲ್ಲಿ 2 ಮಕ್ಕಳನ್ನ ಸಾಕೋದೆ ಕಷ್ಟಕರ ಹೀಗಾಗಿ ಮಕ್ಕಳು ಸಾಕೇ ಸಾಕು ಅಂತ ಮಹಿಳೆಗೆ ಮಕ್ಕಳಾಗದ ಹಾಗೆ ಆಪರೇಷನ್ ಮಾಡಿಸಲಾಗಿತ್ತು. ಆಸ್ಪತ್ರೆಯ ವೈದ್ಯರು ಮಾಡಿದ ಯಡವಟ್ಟು ಈಗ ಆ ದಂಪತಿಗಳನ್ನ ಇಕ್ಕಟ್ಟಿನಲ್ಲಿ ಸಿಲುಕಿಸಿದೆ.
ಬೆಂಗಳೂರು(ಜ.25): ಆ ದಂಪತಿಗೆ ಆಗಲೇ 2 ಗಂಡು ಮಕ್ಕಳಿಗೆ ಜನ್ಮವನ್ನ ಕೊಟ್ಟಿದ್ದರು. ಈ ಆಧುನಿಕ ಕಾಲದಲ್ಲಿ 2 ಮಕ್ಕಳನ್ನ ಸಾಕೋದೆ ಕಷ್ಟಕರ ಹೀಗಾಗಿ ಮಕ್ಕಳು ಸಾಕೇ ಸಾಕು ಅಂತ ಮಹಿಳೆಗೆ ಮಕ್ಕಳಾಗದ ಹಾಗೆ ಆಪರೇಷನ್ ಮಾಡಿಸಲಾಗಿತ್ತು. ಆಸ್ಪತ್ರೆಯ ವೈದ್ಯರು ಮಾಡಿದ ಯಡವಟ್ಟು ಈಗ ಆ ದಂಪತಿಗಳನ್ನ ಇಕ್ಕಟ್ಟಿನಲ್ಲಿ ಸಿಲುಕಿಸಿದೆ.
ಪ್ರತಿಷ್ಟಿತ ಎಂ.ಎಸ್.ರಾಮಯ್ಯ ಆಸ್ಪತ್ರೆ ಮತ್ತೆ ವಿವಾದಕ್ಕೆ ಸಿಲುಕಿದೆ. ಇದೇ ಆಸ್ಪತ್ರೆಯ ವೈದ್ಯರು ಮಾಡಿದ ಮತ್ತೊಂದು ಯಡವಟ್ಟು ಈಗ ದಂಪತಿಯನ್ನ ಇಕ್ಕಟ್ಟಿಗೆ ಸಿಲುಕಿಸಿದೆ. ನಾಗಶೆಟ್ಟಿಹಳ್ಳಿ ನಿವಾಸಿಯಾದ ಚೆಲುವರಾಜು ಮತ್ತು ಚೈತ್ರಾ ದಂಪತಿಗೆ ಈಗಾಗಲೇ ಇಬ್ಬರು ಗಂಡು ಮಕ್ಕಳಿದ್ದು, ಚೈತ್ರಾ ಮತ್ತೆ 5 ತಿಂಗಳ ಗರ್ಭಿಣಿ. ಕಳೆದ 9 ತಿಂಗಳ ಹಿಂದಷ್ಟೇ ಗಂಡು ಮಗುವಿಗೆ ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಜನ್ಮ ನೀಡಿದ್ದ ಚೈತ್ರಾಗೆ ಮಕ್ಕಳಾಗದ ಹಾಗೆ ಟುಬೆಕ್ಟಮಿ ಆಪರೇಷನ್ ಮಾಡಿಸಲಾಗಿತ್ತು. ಈ ಸಂಬಂಧ ಆಪರೇಷನ್ ಸಕ್ಸಸ್ ಆಗಿದೆ ಅಂತ ಆಸ್ಪತ್ರೆ ದಾಖಲೆಗಳನ್ನೂ ನೀಡಿದೆ. ಆದರೂ ಚೈತ್ರ ಇದೀಗ ಮತ್ತೆ ಗರ್ಭಿಣಿಯಾಗಿದ್ದಾರೆ. ಆಸ್ಪತ್ರೆ ವೈದ್ಯರು ಮಾಡಿದ ಮಹಾ ಪ್ರಮಾದದ ಬಗ್ಗೆ ಪ್ರಶ್ನಿಸಲು ಮುಂದಾಗಿದ್ದ ದಂಪತಿಗೆ, ಏನೋ ನಮ್ಮ ಕಡೆಯಿಂದ ಸಣ್ಣ ಯಡವಟ್ಟಾಗಿದೆ ಮಗುವನ್ನು ಆಬಾರ್ಷನ್ ಮಾಡಿಸಿಬಿಡಿ ಎಂದು ಆಸ್ಪತ್ರೆಯವರು ಹೇಳುತ್ತಿದ್ದಾರೆ ಎನ್ನುವುದು ಚೈತ್ರಾ ಪತಿ ಚಲುವರಾಜು ಆರೋಪ .
ಆಪರೇಷನ್ ಮಾಡಿದ್ದೇವೆ ಅಂತ ಆಸ್ಪತ್ರೆ ವೈದ್ಯರು ವರದಿ ನೀಡಿದ್ದಾರೆ. ವೈದ್ಯರ ಯಡವಟ್ಟಿನಿಂದಾಗಿಯೇ ನಾನು ಮತ್ತೊಮ್ಮೆ ಗರ್ಭಿರ್ಣಿಯಾಗಿರುವುದು, ಇದಕ್ಕೆಲ್ಲಾ ಆಸ್ಪತ್ರೆ ಆಡಳಿತ ಮಂಡಳಿ ಕಾರಣವಾಗಿರುವುದರಿಂದ ಅವರ ವಿರುದ್ಧ ಕಾನೂನೂ ಕ್ರಮ ಕೈಗೊಳ್ಳಬೇಕು ಎಂದು ಚೈತ್ರಾ ಆಗ್ರಹಿಸಿದ್ದಾರೆ.
ಅಬಾರ್ಷನ್ ಕಾನೂನು ಬಾಹಿರ ಅಂತ ಗೊತ್ತಿದ್ದರೂ, ತಮ್ಮ ತಪ್ಪು ಮುಚ್ಚಿಕೊಳ್ಳಲು ಅಬಾರ್ಷನ್ ಮಾಡಿಸಿಕೊಳ್ಳಿ ಅಂತ ವೈದ್ಯರು ಹೇಳಿದ್ದಾರೆ ಎಂಬುವುದು ಶಿಕ್ಷಾರ್ಹ ಅಪರಾಧ. ಒಟ್ಟಿನಲ್ಲಿ ವೈದ್ಯರು ಮಾಡಿದ ಯಡವಟ್ಪು ಈಗ ದಂಪತಿಯನ್ನ ಇಕ್ಕಟ್ಟಿಗೆ ಸಿಲುಕಿಸಿದೆ.
