ಡೈರಿಯಲ್ಲಿ ಯಾವುದೇ ಸತ್ಯಾಂಶ ಇಲ್ಲ. ಯಾರದ್ದು ಡೈರಿ ಎಂದು ಹೇಳಲಾಗಿದೆಯೋ ಅವರೇ ಅದು ತಮ್ಮದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹೀಗಿರುವಾಗ ಅದನ್ನು ಒಪ್ಪಲು ಸಾಧ್ಯವಿದೆಯೇ ಎಂದು ರೈ ಪ್ರಶ್ನಿಸಿದ್ದಾರೆ.

ಮಂಗಳೂರು (ಫೆ.24): ಹೈಕಮಾಂಡ್​ಗೆ ಕಪ್ಪ ನೀಡಿಕೆ ಕುರಿತ ಡೈರಿ ಬಗ್ಗೆ ಮಂಗಳೂರಿನಲ್ಲಿ ಅರಣ್ಯ ಸಚಿವ ರಮಾನಾಥ ರೈ ಪ್ರತಿಕ್ರಿಯೆ ನೀಡಿದ್ದಾರೆ.

ಡೈರಿಯಲ್ಲಿ ಯಾವುದೇ ಸತ್ಯಾಂಶ ಇಲ್ಲ. ಯಾರದ್ದು ಡೈರಿ ಎಂದು ಹೇಳಲಾಗಿದೆಯೋ ಅವರೇ ಅದು ತಮ್ಮದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಹೀಗಿರುವಾಗ ಅದನ್ನು ಒಪ್ಪಲು ಸಾಧ್ಯವಿದೆಯೇ ಎಂದು ರೈ ಪ್ರಶ್ನಿಸಿದ್ದಾರೆ.

ರಾಜ್ಯದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಮಾಡಿ ಜೈಲು ಸೇರಿದವರೇ ನಮಗೆ ಬುದ್ದಿ ಹೇಳುತ್ತಿದ್ದಾರೆ ಎಂದು ಯಡಿಯೂರಪ್ಪ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ರೈ, ಕೇಂದ್ರ ಸರ್ಕಾರ ಅಧಿಕಾರ ದುರುಪಯೋಗ ಮಾಡುತ್ತಿದೆ ಎಂದು ಆರೋಪಿಸಿದರು.