ಸಿಎಂ ಸ್ವಕ್ಷೇತ್ರದಲ್ಲೇ ಕಮಿಷನ್‌ಗಾಗಿ ಇಂಜಿನಿಯರ್‌ಗೆ ಧಮ್ಕಿ!

First Published 15, Jun 2018, 3:04 PM IST
Ramanagara: Grama Panchayat President  threatens Engineer for money
Highlights

ಮುಖ್ಯಮಂತ್ರಿ ಕುಮಾರಸ್ವಾಮಿ ಸ್ವಕ್ಷೆತ್ರ ರಾಮನಗರದಲ್ಲಿಯೇ ಕಮಿಷನ್ ಗಾಗಿ ಧಮ್ಕಿ ಹಾಕಿದ ಪ್ರಕರಣ ನಡೆದಿದೆ. ಗ್ರಾಮ ಪಂಚಾಯತಿ ಅಧ್ಯಕ್ಷರೊಬ್ಬರು ಇಂಜಿನಿಯರ್ ಗೆ ಹಣದ ಬೇಡಿಕೆ ಇಟ್ಟಿದ್ದಾರೆ.

 

 

ರಾಮನಗರ, ಜೂನ್ 15:  ಮುಖ್ಯಮಂತ್ರಿ ಕುಮಾರಸ್ವಾಮಿ ಸ್ವಕ್ಷೆತ್ರ ರಾಮನಗರದಲ್ಲಿಯೇ ಕಮಿಷನ್ ಗಾಗಿ ಧಮ್ಕಿ ಹಾಕಿದ ಪ್ರಕರಣ ನಡೆದಿದೆ. ಗ್ರಾಮ ಪಂಚಾಯತಿ ಅಧ್ಯಕ್ಷರೊಬ್ಬರು ಇಂಜಿನಿಯರ್ ಗೆ ಹಣದ ಬೇಡಿಕೆ ಇಟ್ಟಿದ್ದಾರೆ.

ಬೆದರಿಕೆ ಹಾಕಿದ್ದು ಮಾತ್ರವಲ್ಲದೇ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಣ ಕೊಡದಿದ್ದರೆ ಕುಮಾರಸ್ವಾಮಿಗೆ ಹೇಳುವುದಾಗಿ ಬೆದರಿಕೆ ಹಾಕಿದ್ದಾನೆ. ಹುಣಸನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಮರಲಿಂಗಯ್ಯ ಇಂಜಿನಿಯರ್ ಗೆ ಹಣದ ಬೇಡಿಕೆ ಇಡುತ್ತಿರುವ ಆಡಿಯೋ ಇದೀಗ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದೆ.

ಗ್ರಾಮದ ಅಭಿವೃದ್ಧಿಗಾಗಿ ಬಿಡುಗಡೆಯಾಗಿದ್ದ ಹಣದಲ್ಲಿ ಕಮೀಷನ್ ಕೊಡುವಂತೆ ಧಮಕಿ ಹಾಕಿದ್ದು ಇದೀಗ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಸಿಎಂ ಸ್ವಕ್ಷೇತ್ರದಲ್ಲಿಯೇ ಹೀಗಾದರೆ ರಾಜ್ಯದ ಉಳಿದ ಭಾಗಗಳ ಸ್ಥಿತಿಯೇನು ಎಂದು ನಾಗರಿಕರು ಪ್ರಶ್ನೆ ಮಾಡಿದ್ದಾರೆ.

loader