ರಾಮನಗರ ಕೈ ಕಾರ್ಯಕರ್ತರು ಬಿಜೆಪಿಗೆ? ಡಿಕೆ ಸುರೇಶ್ ಸಭೆಯಲ್ಲಿ ಆಗಿದ್ದೇನು?

ಸಮ್ಮಿಶ್ರ ಸರಕಾರದಲ್ಲಿ ಹಿರಿಯ ನಾಯಕರು ಒಪ್ಪಂದ ಮಾಡಿಕೊಂಡು ರಾಮನಗರವನ್ನು ಜೆಡಿಎಸ್‌ ಗೆ ಬಿಟ್ಟುಕೊಟ್ಟಿದ್ದಾರೆ.  ಆದರೆ ಈ ವಿಚಾರವನ್ನು ರಾಮನಗರ ಸ್ಥಳೀಯ ಕಾಂಗ್ರೆಸ್ ಮುಖಂಡರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ramanagara by election Local Congress workers unhappy with JDS

ರಾಮನಗರ[ಅ.14]  ಸಂಸದ ಡಿಕೆ ಸುರೇಶ್ ಎದುರು ಕೈ ಕಾರ್ಯಕರ್ತರ ಅಳಲು ತೋಡಿಕೊಂಡಿದ್ದಾರೆ.  ರಾಮನಗರದಲ್ಲಿ ಯಾವುದೇ ಮೈತ್ರಿ ಸಾಧ್ಯವಿಲ್ಲ. ದೇವೇಗೌಡರ ಮನೆಯವರೇ ಇಲ್ಲಿ ರಾಜಕಾರಣ ಮಾಡಬೇಕಾ? ಎಂದು ಪ್ರಶ್ನೆ ಮಾಡಿದ್ದಾರೆ.

ಅಪ್ಪ, ಮಗ, ಸೊಸೆ, ಮೊಮ್ಮಕ್ಕಳು ಅವರೇ ರಾಜ್ಯಭಾರ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಜೆಡಿಎಸ್ ನವರ ಮುಂದೆ ನಮ್ಮ ಕಾರ್ಯಕರ್ತರಿಗೆ ಯಾವುದೇ ಬೆಲೆಯಿಲ್ಲದ ಸ್ಥಿತಿ ನಿರ್ಮಾಣವಾಗಿದೆ.  ಪ್ರತಿ ಇಲಾಖೆಯಲ್ಲೂ ಜೆಡಿಎಸ್ ನವರದ್ದೇ ಪಾರುಪತ್ಯವಿದೆ. 70 ಸಾವಿರ ಮತಕೊಟ್ಟಿರುವ ನಮ್ಮ ಕತೆಯೇನು ಎಂದು ಪ್ರಶ್ನಿಸಿದ್ದಾರೆ.

ರಾಮನಗರಕ್ಕೆ ಬಿಜೆಪಿಯಿಂದ ಅಚ್ಚರಿ ಅಭ್ಯರ್ಥಿಗೆ ಟಿಕೆಟ್

ನೀವು ಮನಸ್ಸು ಮಾಡಿದರೇ ಇಲ್ಲಿ ಜೆಡಿಎಸ್ ನವರನ್ನು ಸೋಲಿಸಬಹು ಎಂಬ ಬಢಿಕೆಯನ್ನು ಇಟ್ಟ ಕಾರ್ಯಕರ್ತರನ್ನು ಸುರೇಶ್ ಸಮಾಧಾನ ಪಡಿಸಿದ್ದಾರೆ. 30 ವರ್ಷದಿಂದ ನಮ್ಮ ಕಾರ್ಯಕರ್ತರು ಜೆಡಿಎಸ್ ವಿರುದ್ಧ ಹೋರಾಟ ಮಾಡಿಕೊಂಡು ಬಂದಿದ್ದಾರೆ.  ನಮ್ಮ ಪಕ್ಷ ಕೂಡ ಬಲಿಷ್ಠವಾಗಿದೆ.  ಹಾಗಾಗಿ ನೀವು ನಮ್ಮ ಜೊತೆ ಇರಬೇಕು ಎಂದು ಮನವಿ ಮಾಡಿದ್ದಾರೆ.

ನಮ್ಮ ಕಾರ್ಯಕರ್ತರು ಬಾಯಲ್ಲಿ ಹೇಳ್ತಿದ್ದಾರೆ ಆದರೆ  ಬಿಜೆಪಿ ಕಡೆಗೆ ಮನಸ್ಸಿಲ್ಲ. ಮುಂದಿನ ಚುನಾವಣೆಗೆ ರಾಮನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರನ್ನ ಆಯ್ಕೆ ಮಾಡಿಕೊಳ್ಳೋಣ. ನಾನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ, ಪಕ್ಷದ ವರಿಷ್ಠರು ಕಾರ್ಯಕರ್ತರು ಹೇಳಿದಂತೆ ನಡೆದುಕೊಳ್ಳುತ್ತೇನೆ. ಹಣೆಬರಹಕ್ಕೆ ಯಾರು ಹೊಣೆ, ಕಾದು ನೋಡೋಣ ಎಂದು ಸಮಾಧಾನ ಮಾಡುವ ಕೆಲಸ ಮಾಡಿದ್ದಾರೆ.

ಲಿಂಗಪ್ಪರವರು ಕಾಂಗ್ರೆಸ್ ಕಟ್ಟಾಳು, ಅವರು ಪಕ್ಷದ ವಿರುದ್ಧ ಹೋಗಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಇನ್ನೊಂದು ಕಡೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಇಕ್ಬಾಲ್ ಹುಸೇನ್ ಪ್ರತಿಕ್ರಿಯೆ ನೀಡಿದ್ದು  ಪಕ್ಷದ ಬಗ್ಗೆ ಕಾಳಜಿ ಇದೆ. ಹಾಗಾಗಿ ಪಕ್ಷ ಹೇಳಿದಂತೆ ನಡೆದುಕೊಳ್ಳುತ್ತೇವೆ. ಪಕ್ಷದ ವರಿಷ್ಠರ ಆದೇಶಕ್ಕೆ ನಾವು ಕೆಲಸ ಮಾಡಬೇಕಾಗುತ್ತೆ. ಸಮ್ಮಿಶ್ರ ಸರ್ಕಾರದ ಹಿತದೃಷ್ಟಿಯಿಂದ ಈ ಬಾರಿಯ ಚುನಾವಣೆಯಿಂದ ಹಿಂದೆಸರಿಯುತ್ತೇನೆ ಎಂದಿದ್ದಾರೆ.

Latest Videos
Follow Us:
Download App:
  • android
  • ios