ಕಷ್ಟಪಟ್ಟು ಸಂಪಾದನೆ ಮಾಡಿದ ಹಣವನ್ನ ಬ್ಯಾಂಕ್‍‌ನಲ್ಲಿ ಇಡೋಣ ಅಂದರೆ ಈಗ ಅದು ಕೂಡ ಸೇಫ್ ಅಲ್ಲ. ಅದೆಷ್ಟೇ ಗೌಪ್ಯವಾಗಿ ಬ್ಯಾಂಕ್‌ನಲ್ಲಿಟ್ಟರೂ ಖದೀಮರು ನಿಮ್ಮ ಅಕೌಂಟ್‌ನಿಂದಲೇ ಹಣ ಎಗರಿಸಿಬಿಡುತ್ತಾರೆ. ಇದಕ್ಕೆ ಮತ್ತೊಂದು ಉದಾಹರಣೆ ಇಲ್ಲಿದೆ.

ರಾಮನಗರ(ಆ.20): ಬ್ಯಾಂಕ್ ಅಕೌಂಟ್ ಹಾಗೂ ಎಟಿಂ ಕಾರ್ಡ್‌ಗಳನ್ನ ದುರ್ಬಳಕೆ ಮಾಡಿಕೊಳ್ಳೋ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿದೆ. ಇದೀಗ ಖ್ಯಾತ ರೇಡಿಯೋ ಜಾಕಿ ಶೃತಿ ಬ್ಯಾಂಕ್ ಅಕೌಂಟ್‌ಗೆ ಕನ್ನ ಹಾಕಿರುವ ದುಷ್ಕರ್ಮಿಗಳು 30 ಸಾವಿರ ರೂಪಾಯಿ ಹಣ ಡ್ರಾ ಮಾಡಿದ್ದಾರೆ.

ಸ್ಕ್ಮಿಮ್ಮಂಗ್ ಮಿಷಿನ್ ಬಳಸಿ ಆರ್‌ಜೆ ಶೃತಿ ಎಟಿಂ ಕಾರ್ಡ್ ದುರ್ಬಳಕೆ ಮಾಡಿದ್ದಾರೆ. ಈ ಮೂಲಕ ರಾಮನಗರದ ಕೆನರಾ ಬ್ಯಾಕ್ ಎಟಿಎಂನಿಂದ 30 ಸಾವಿರ ರೂಪಾಯಿಯನ್ನ ಖದೀಮರು ಡ್ರಾ ಮಾಡಿದ್ದಾರೆ.ಕಳೆದ ಶನಿವಾರ ರಾತ್ರಿ ಶೃತಿ ಅಕೌಂಟ್ ನಲ್ಲಿ ಹಣ ಡ್ರಾ ಆಗಿರುವ ಬಗ್ಗೆ ಶೃತಿಗೆ ಮಾಹಿತಿ ಸಿಕ್ಕಿದೆ. 

ಎಟಿಎಂ ಕಾರ್ಡ್ ದುರ್ಬಳಕೆ ಪ್ರಕಣ ಸಂಬಂಧ ಶೃತಿ ಬೆಂಗಳೂರು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.