ಬಿಜೆಪಿಗರು ಹೇಳೋದೊಂದು ಮಾಡೋದೊಂದು : ರಾಮಲಿಂಗಾ ರೆಡ್ಡಿ

First Published 27, Feb 2018, 10:36 AM IST
Ramalinga Reddy Slams BJP
Highlights

ಕಾಂಗ್ರೆಸ್ ಪಕ್ಷ ಸೇರಿದಂತೆ ಯಾರೇ ತಪ್ಪು ಮಾಡಿದರೂ ಸರ್ಕಾರ ಮುಲಾಜಿಲ್ಲದೇ ಕಾನೂನಿನ ಕ್ರಮ ಕೈಗೊಳ್ಳುತ್ತದೆ. ಯಾರನ್ನೂ ಸಮರ್ಥಿಸಿಕೊಳ್ಳುವುದಿಲ್ಲ. ಆದರೆ, ಬಿಜೆಪಿ ಮುಖಂಡರು ತಮ್ಮ ಪಕ್ಷದ ಕಾರ್ಯಕರ್ತರು ತಪ್ಪು ಮಾಡಿದರೆ ಕನಿಷ್ಠ ಖಂಡಿಸುವ ಕೆಲಸ ಸಹ ಮಾಡುವುದಿಲ್ಲ.

ಬೆಂಗಳೂರು: ಕಾಂಗ್ರೆಸ್ ಪಕ್ಷ ಸೇರಿದಂತೆ ಯಾರೇ ತಪ್ಪು ಮಾಡಿದರೂ ಸರ್ಕಾರ ಮುಲಾಜಿಲ್ಲದೇ ಕಾನೂನಿನ ಕ್ರಮ ಕೈಗೊಳ್ಳುತ್ತದೆ. ಯಾರನ್ನೂ ಸಮರ್ಥಿಸಿಕೊಳ್ಳುವುದಿಲ್ಲ. ಆದರೆ, ಬಿಜೆಪಿ ಮುಖಂಡರು ತಮ್ಮ ಪಕ್ಷದ ಕಾರ್ಯಕರ್ತರು ತಪ್ಪು ಮಾಡಿದರೆ ಕನಿಷ್ಠ ಖಂಡಿಸುವ ಕೆಲಸ ಸಹ ಮಾಡುವುದಿಲ್ಲ.

ಬದಲಾಗಿ ಬೆಂಬಲ ನೀಡುತ್ತಾರೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ತಿರುಗೇಟು ನೀಡಿದ್ದಾರೆ.ಶಾಸಕ ಹ್ಯಾರಿಸ್ ಪುತ್ರ ಮೊಹಮದ್ ನಲಪಾಡ್, ಕಾಂಗ್ರೆಸ್ ಮುಖಂಡ ನಾರಾಯಣ ಸ್ವಾಮಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಆದರೆ, ಬಿ.ಎಸ್.ಯಡಿಯೂರಪ್ಪ ಅವರ ಆಪ್ತ ಸಂತೋಷ್ ಮೂಲಕ ನಡೆದ ವಿನಯ್ ಎಂಬುವರ ಮೇಲೆ ನಡೆದ ಹಲ್ಲೆ, ಬಿಬಿಎಂಪಿ ಮಾಜಿ ಸದಸ್ಯ ಗೋವಿಂದೇಗೌಡ ಹತ್ಯೆ, ಹಿರಿಯ ಪೊಲೀಸ್ ಅಧಿಕಾರಿ ಸತ್ಯನಾರಾಯಣ ಮಗನ ಮೇಲೆ ನಡೆದ ಹಲ್ಲೆ ಮುಂತಾದ ಘಟನೆಗಳು ಬಿಜೆಪಿಯವರಿಂದಲೇ ನಡೆದಿದೆ.

ಆದರೆ, ಈ ಘಟನೆಗಳ ಬಗ್ಗೆ ಬಿಜೆಪಿ ನಾಯಕರು ಚಕಾರ ಎತ್ತುವುದಿಲ್ಲ, ಬಿಜೆಪಿಯವರು ಹೇಳುವುದೊಂದು, ಮಾಡುವುದೊಂದು ಎಂದು ಟೀಕಿಸಿದ್ದಾರೆ. ವಿದ್ಯುನ್ಮಾನ ಮತ ಯಂತ್ರ ಅಥವಾ ಮತ ಪತ್ರಗಳು ಬಳಸಲಿ ರಾಜ್ಯದಲ್ಲಿ ಕಾಂಗ್ರೆಸ್ 150 ಸೀಟುಗಳನ್ನು ಗೆಲ್ಲಲಿದೆ ಎಂದರು.

loader