ಅರ್ಹತೆ ಇದ್ದರೆ ನನ್ನ ಮಗಳಿಗೆ ಟಿಕೆಟ್ ನೀಡಲಿ : ರಾಮಲಿಂಗಾರೆಡ್ಡಿ

Ramalinga Reddy Doughter Wants Congress Ticket
Highlights

ಬೆಂಗಳೂರಿನ ಹಳೆಯ ಕ್ಷೇತ್ರವಾದ ಜಯನಗರದಿಂದ ಸ್ಪರ್ಧಿಸಲು ನನ್ನ ಪುತ್ರಿ ಸೌಮ್ಯಾ ರೆಡ್ಡಿ ಬಯಸಿದ್ದು ನಿಜ ಎಂದು ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

ಕಲಬುರಗಿ : ಬೆಂಗಳೂರಿನ ಹಳೆಯ ಕ್ಷೇತ್ರವಾದ ಜಯನಗರದಿಂದ ಸ್ಪರ್ಧಿಸಲು ನನ್ನ ಪುತ್ರಿ ಸೌಮ್ಯಾ ರೆಡ್ಡಿ ಬಯಸಿದ್ದು ನಿಜ ಎಂದು ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

ಆಕೆ ಜಯನಗರದಿಂದ ಕಾಂಗ್ರೆಸ್ ಟಿಕೆಟ್ ಕೇಳಿದ್ದಾಳೆ. ಅರ್ಹತೆ ಇದ್ದಲ್ಲಿ ಆಕೆಗೆ ಟಿಕೆಟ್ ನೀಡಲಿ. ನನ್ನ ಮಗಳು ಎನ್ನುವ ಕಾರಣಕ್ಕೆ ಆಕೆಗೆ ಟಿಕೆಟ್ ನೀಡುವ ಅವಶ್ಯಕತೆ ಇಲ್ಲ ಎಂದಿದ್ದಾರೆ.

ಯುವ ಕಾಂಗ್ರೆಸ್ ಹಾಗೂ ಮಹಿಳಾ ಕಾಂಗ್ರೆಸ್’ನಲ್ಲಿ ಕೆಲಸ ಮಾಡುತ್ತಿದ್ದಾಳೆ. ಅರ್ಹತೆ ಇದ್ದರೆ ಅದನ್ನು ಪರಿಗಣನೆಗೆ ತೆಗೆದುಕೊಂಡು ಟಿಕೆಟ್ ನೀಡಲಿ ಎಂದು ಹೇಳಿದ್ದಾರೆ.

loader