ಪಕ್ಷದ ವೇದಿಕೆ ಬಿಟ್ಟು ಪ್ರತ್ಯೇಕ ಸಂಘಟನೆ ಮಾಡದಂತೆ ರಾಮಲಾಲ್ ಈಶ್ವರಪ್ಪ ಸೇರಿದಂತೆ ಎಲ್ಲ ನಾಯಕರಿಗೂ ತಾಕೀತು ಮಾಡಿದ್ದಾರೆ.

ಬೆಂಗಳೂರು(ಅ.06): ರಾಯಣ್ಣ ಬ್ರಿಗೇಡ್ ಕಟ್ಟಿ ಯಡಿಯೂರಪ್ಪ ವಿರುದ್ಧ ತೊಡೆತಟ್ಟಿದ್ದ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪಗೆ ಪ್ರತ್ಯೇಕ ಸಂಘಟನೆ ಕೈಬಿಡುವಂತೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ರಾಮಲಾಲ್ ಕೋರ್ ಕಮಿಟಿ ಸಭೆಯಲ್ಲಿ ಖಡಕ್ ಸಂದೇಶ ನೀಡಿದ್ದಾರೆ. ಆದರೆ, ಏಕಾಏಕಿ ರಾಯಣ್ಣ ಬ್ರಿಗೇಡ್ ಕೈಬಿಟ್ಟರೆ ತಪ್ಪು ಸಂದೇಶ ರವಾನೆಯಾಗುತ್ತೆ ಎಂದು ಈಶ್ವರಪ್ಪ ತಿಳಿಸಿದ್ದಾರೆ. ಹೀಗಾಗಿ, ಈಶ್ವರಪ್ಪಗೆ ಸಮಯ ನೀಡಿದ ರಾಮಲಾಲ್ ಕ್ರಮೇಣ ರಾಯಣ್ಣ ಬ್ರಿಗೇಡ್ ಕೈಬಿಡುವಂತೆ ಸೂಚಿಸಿದ್ದಾರೆ.

ಇದೇವೇಳೆ, ಶಿವಮೊಗ್ಗ ಟಿಕೆಟ್ ಖಾತರಿ ಬಗ್ಗೆ ಈಶ್ವರಪ್ಪ ಪ್ರಸ್ತಾಪಿಸಿದ್ದು, ಸಮೀಕ್ಷೆ ನಡೆಸಿ ಟಿಕೆಟ್ ನೀಡುವುದಾಗಿ ರಾಮಲಾಲ್ ತಿಳಿಸಿದ್ಧಾರೆ ಎಂದು ತಿಳಿದುಬಂದಿದೆ. ಹಾಗಿದ್ದರೆ, ಎಲ್ಲರಿಗೂ ಸಮೀಕ್ಷೆ ನಡೆಸಿಯೇ ಟಿಕೆಟ್ ನೀಡಿ ಎಂದ ಈಶ್ವರಪ್ಪ ತೀವ್ರ ಅಸಮಾಧಾನದಿಂದ ತೆರಳಿದ್ದಾರೆ.

ಪಕ್ಷದ ವೇದಿಕೆ ಬಿಟ್ಟು ಪ್ರತ್ಯೇಕ ಸಂಘಟನೆ ಮಾಡದಂತೆ ರಾಮಲಾಲ್ ಈಶ್ವರಪ್ಪ ಸೇರಿದಂತೆ ಎಲ್ಲ ನಾಯಕರಿಗೂ ತಾಕೀತು ಮಾಡಿದ್ದಾರೆ.