ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಮಮಂದಿರ ಖಚಿತ| ಹಿರಿಯ ಕಾಂಗ್ರೆಸ್ ನಾಯಕ ಹರೀಶ್ ರಾವತ್ ಘೋಷಣೆ| ನೈತಿಕತೆ ಇಲ್ಲದ ಬಿಜೆಪಿಯಿಂದ ಮಂದಿರ ನಿರ್ಮಾಣ ಇಲ್ಲ
ಡೆಹ್ರಾಡೂನ್[ಜ.19]: ಮೃದು ಹಿಂದುತ್ವ ಧೋರಣೆ ಪಾಲಿಸುವ ಮೂಲಕ ಇತ್ತೀಚಿನ ಮೂರು ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಕಾಂಗ್ರೆಸ್, ಇದೀಗ ಅಯೋಧ್ಯೆಯಲ್ಲಿ ರಾಮಮಂದಿರ ಜಪ ಮಾಡಲು ಶುರು ಮಾಡಿದೆ. ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದರೆ ಮಾತ್ರವೇ, ರಾಮಮಂದಿರ ನಿರ್ಮಾಣ ಸಾಧ್ಯ ಎಂದು ಅದು ಹೇಳಿದೆ.
ಈ ಕುರಿತು ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಉತ್ತರಾಖಂಡದ ಮಾಜಿ ಸಿಎಂ ಮತ್ತು ಮಾಜಿ ಕೇಂದ್ರ ಸಚಿವ ಹರೀಶ್ ರಾವತ್, ‘ಬಿಜೆಪಿ ನೈತಿಕತೆಯೇ ಇಲ್ಲದವರನ್ನು ಒಳಗೊಂಡಿರುವ ಪಕ್ಷ. ಮರ್ಯಾದಾ ಪುರುಷೋತ್ತಮ ರಾಮನ ಹೆಸರಲ್ಲಿ ಭಕ್ತರಿಗೆ ಕೊಟ್ಟಮಾತನ್ನೂ ಉಳಿಸಿಕೊಳ್ಳುವ ನೈತಿಕತೆ ಅವರಿಗಿಲ್ಲ. ಸಂವಿಧಾನ ಮತ್ತು ನೈತಿಕತೆ ವಿಚಾರದಲ್ಲಿ ಇಷ್ಟುಅಧೋಗತಿಗೆ ತಲುಪುತ್ತಾರೆ ಅಂದುಕೊಂಡಿರಲಿಲ್ಲ. ಅಯೋಧ್ಯೆಯಲ್ಲೇ ರಾಮ ನಿರ್ಮಾಣ ಸಾಧ್ಯವೆಂದಾದರೆ ಅದಕ್ಕೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ಆಗ ರಾಮ ಮಂದಿರ ನಿರ್ಮಾಣ ಶತಸಿದ್ಧ ಎಂದಿದ್ದಾರೆ.
