ರಾಮಮಂದಿರ-ಬಾಬ್ರಿ ಮಸೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಸೀದಿ ನಿರ್ಮಾಣಕ್ಕೆ ಬಿಜೆಪಿ ಜಾಗವನ್ನು ಕೊಡಲು ಸಿದ್ಧವಿದ್ದು, ಬಹಳ ಹಳೆಯದಾದ ಈ ವಿವಾದಕ್ಕೆ ಅಂತ್ಯ ಹಾಡಬೇಕೆಂದು ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.  

ನವದೆಹಲಿ (ಏ.01): ರಾಮಮಂದಿರ-ಬಾಬ್ರಿ ಮಸೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಸೀದಿ ನಿರ್ಮಾಣಕ್ಕೆ ಬಿಜೆಪಿ ಜಾಗವನ್ನು ಕೊಡಲು ಸಿದ್ಧವಿದ್ದು, ಬಹಳ ಹಳೆಯದಾದ ಈ ವಿವಾದಕ್ಕೆ ಅಂತ್ಯ ಹಾಡಬೇಕೆಂದು ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.

ಬಹಳ ಹಳೆಯದಾಗಿರುವ ರಾಮಮಂದಿರ ವಿವಾದವು ಶೀಘ್ರದಲ್ಲಿ ಬಗೆಹರಿಯಬೇಕು. ಇದು ರಾಮಜನ್ಮಭೂಮಿಯೆಂದು ನಮಗೆ ತಿಳಿದಿದೆ. ಮಸೀದಿ ನಿರ್ಮಾಣಕ್ಕೆ ಬಿಜೆಪಿ ಜಾಗವನ್ನು ಕೊಡಲು ಸಿದ್ಧವಿದೆ ಎಂದು ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.

ಸುಪ್ರೀಂಕೋರ್ಟ್ ನಮ್ಮ ಅರ್ಜಿಯನ್ನು ಸ್ವೀಕೃತಗೊಳಿಸಿದ್ದು ನಮ್ಮ ಪರವಾಗಿಯೇ ತೀರ್ಪು ಹೊರಬೀಳುತ್ತದೆನ್ನುವ ಭರವಸೆಯಿದೆ ಎಂದಿದ್ದಾರೆ.