ಆರ್’ಜೆಡಿಯಿಂದ ರಾಮಮಂದಿರ ನಿರ್ಮಾಣ : ತೇಜ್ ಪ್ರತಾಪ್

First Published 12, Mar 2018, 9:36 AM IST
Ram Temple Built From RJD
Highlights

ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ನಾವು ನಿರ್ಮಾಣ ಮಾಡುತ್ತೇವೆ ಎಂದು ಹೇಳುವ ಮೂಲಕ ಆರ್‌ಜೆಡಿ ಮುಖಂಡ ಮತ್ತು ಬಿಹಾರದ ಮಾಜಿ ಸಚಿವ ತೇಜ್ ಪ್ರತಾಪ್ ಯಾದವ್ ವಿವಾದ ಮೈಮೇಲೆ ಹಾಕಿಕೊಂಡಿದ್ದಾರೆ.

ಪಟನಾ: ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ನಾವು ನಿರ್ಮಾಣ ಮಾಡುತ್ತೇವೆ ಎಂದು ಹೇಳುವ ಮೂಲಕ ಆರ್‌ಜೆಡಿ ಮುಖಂಡ ಮತ್ತು ಬಿಹಾರದ ಮಾಜಿ ಸಚಿವ ತೇಜ್ ಪ್ರತಾಪ್ ಯಾದವ್ ವಿವಾದ ಮೈಮೇಲೆ ಹಾಕಿಕೊಂಡಿದ್ದಾರೆ. ಅವರ ಹೇಳಿಕೆಗೆ ಅಪಸ್ವರ ಕೇಳಿಬರುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ತೇಜ್, ‘ತಾನು ಜಾತ್ಯತೀತ ದೇಗುಲದ ಬಗ್ಗೆ ಪ್ರಸ್ತಾಪಿಸಿದ್ದೇನೆ’ ಎಂದು ಟ್ವೀಟ್ ಮಾಡಿದ್ದಾರೆ.

‘ಬಿಜೆಪಿ ಮಂದಿರದ ಬಗ್ಗೆ ಬಡ ಬಡಾಯಿಸುತ್ತಲೇ ಇರುತ್ತದೆ. ಆದರೆ, ನಾವು ಹಿಂದೂ, ಮುಸ್ಲಿಂ, ಸಿಖ್, ಕ್ರಿಶ್ಚಿಯನ್ನರು ಒಟ್ಟಿಗೆ ಸೇರಿ ಪ್ರಾರ್ಥಿಸುವ ಮಾನವತಾವಾದದ ಮಂದಿರ ನಿರ್ಮಿತ್ತೇವೆ ಎಂದಿದ್ದೆ’ ಎಂದು ಸ್ಪಷ್ಟನೆ ನೀಡಿದ್ದಾರೆ.

loader