ಪಂಚಕುಲದಲ್ಲಿ ನಡೆದ ಹಿಂಸಾಚಾರ ಪ್ರಕರಣದಲ್ಲಿ ಜೈಲು ಪಾಲಾಗಿರುವ ಡೇರಾ ಸಚ್ಚಾ ಸೌಧಾ ನಾಯಕ ರಾಂ ರಹೀಂನ ಆಪ್ತೆ ಹನಿಪ್ರೀತ್ ಇದೀಗ ತನ್ನ ವಿರುದ್ಧದ ಕೇಸಿನ ಬಗ್ಗೆ ಹೋರಾಡಲೂ ಕೂಡ ಸಾಧ್ಯವಾಗದ ಸ್ಥಿತಿ ತಲುಪಿದ್ದಾಳಂತೆ.
ಚಂಡೀಗಢ(ಡಿ.6): ಪಂಚಕುಲದಲ್ಲಿ ನಡೆದ ಹಿಂಸಾಚಾರ ಪ್ರಕರಣದಲ್ಲಿ ಜೈಲು ಪಾಲಾಗಿರುವ ಡೇರಾ ಸಚ್ಚಾ ಸೌಧಾ ನಾಯಕ ರಾಂ ರಹೀಂನ ಆಪ್ತೆ ಹನಿಪ್ರೀತ್ ಇದೀಗ ತನ್ನ ವಿರುದ್ಧದ ಕೇಸಿನ ಬಗ್ಗೆ ಹೋರಾಡಲೂ ಕೂಡ ಸಾಧ್ಯವಾಗದ ಸ್ಥಿತಿ ತಲುಪಿದ್ದಾಳಂತೆ. ಈ ವಿಷಯವನ್ನು ಸ್ವತಃ ಹನಿ ಪ್ರೀತ್, ಜೈಲು ಅಧಿಕಾರಿಗಳಿಗೆ ತಿಳಿಸಿದ್ದಾಳೆ.
ಎಸ್ಐಟಿ ನನ್ನ ವಿರುದ್ಧ ಆರೋಪಪಟ್ಟಿ ದಾಖಲಿಸಿದೆ. ಇದರ ವಿರುದ್ಧ ಹೋರಾಡಲು ನಾನು ವಕೀಲರ ನೇಮಿಸಿಕೊಳ್ಳಬೇಕಿದೆ. ಆದರೆ ನನ್ನ 3 ಬ್ಯಾಂಕ್ ಖಾತೆ ಮುಟ್ಟುಗೋಲು ಹಾಕಿರುವ ಪರಿಣಾಮ ಹಣ ಇಲ್ಲ ಎಂದಿದ್ದಾಳೆ.
