ಅತ್ಯಾಚಾರಿ ರಾಮ್  ರಹೀಂ ಸಿಂಗ್‌ಗೆ ಜೈಲು ಶಿಕ್ಷೆ ಘೋಷಣೆಯಾಗುವ ಒಂದು ದಿನ ಮೊದಲೇ ಪಂಚಕುಲಾದಲ್ಲಿ ಹಿಂಸಾಚಾರ ನಡೆಸಲು ದತ್ತುಪುತ್ರಿ ಹನಿಪ್ರೀತ್​ 1.25 ಕೋಟಿ ರೂಪಾಯಿ ಹಣ ನೀಡಿದ್ದಳು ಅನ್ನೋ ಮಾಹಿತಿ ಬಹಿರಂಗವಾಗಿದೆ.

ನವದೆಹಲಿ (ಅ.07): ಅತ್ಯಾಚಾರಿ ರಾಮ್ ರಹೀಂ ಸಿಂಗ್‌ಗೆ ಜೈಲು ಶಿಕ್ಷೆ ಘೋಷಣೆಯಾಗುವ ಒಂದು ದಿನ ಮೊದಲೇ ಪಂಚಕುಲಾದಲ್ಲಿ ಹಿಂಸಾಚಾರ ನಡೆಸಲು ದತ್ತುಪುತ್ರಿ ಹನಿಪ್ರೀತ್​ 1.25 ಕೋಟಿ ರೂಪಾಯಿ ಹಣ ನೀಡಿದ್ದಳು ಅನ್ನೋ ಮಾಹಿತಿ ಬಹಿರಂಗವಾಗಿದೆ.

ಹಣವನ್ನ ಡೇರಾದ ಪಂಚಕುಲಾ ಶಾಖೆ ಮುಖ್ಯಸ್ಥ ಚಾಮ್‌ಕೌರ್‌ ಸಿಂಗ್‌ಗೆ ನೀಡಿದ್ದರು ಎಂದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಆರೋಪಿ ರಾಕೇಶ್ ಕುಮಾರ್‌ ಈಗ ಎಸಿಪಿ ಮುಕೇಶ್‌ ಮಲ್ಹೋತ್ರಾ ನೇತೃತ್ವದ ವಿಶೇಷ ತನಿಖಾ ತಂಡದ ವಶದಲ್ಲಿದ್ದಾನೆ. ಹಿಂಸಾಚಾರ ನಿಯಂತ್ರಿಸಲು ಪೊಲೀಸರು ಗುಂಡು ಹಾರಿಸಿದ ಬಳಿಕ 36 ಮಂದಿ ಡೇರಾ ಬೆಂಬಲಿಗರು ಮೃತಪಟ್ಟಿದ್ದರು. ರಾಕೇಶ್‌ನನ್ನು ಸೆಪ್ಟೆಂಬರ್‌ 27ರಂದು ಬಂಧಿಸಲಾಗಿತ್ತು. ಗಲಾಟೆ ನಡೆಸುವಮಥೆ ಚಾಮ್‌ಕೌರ್‌ಗೆ 1.25 ಕೋಟಿ ರೂ ಹಸ್ತಾಂತರವಾಗಿರುವುದನ್ನು ಪಂಚಕುಲಾ ಪೊಲೀಸ್ ಕಮಿಷನರ್‌ ಎ.ಎಸ್‌ ಚಾವ್ಲಾ ಖಚಿತಪಡಿಸಿದ್ದಾರೆ. ಸದ್ಯ ಹನಿಪ್ರೀತ್‌‌ 6 ದಿನಗಳ ಪೊಲೀಸ್‌ ಕಸ್ಟಡಿಯಲ್ಲಿದ್ದು, ಹನಿಪ್ರೀತ್‌ಳನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.