ಕಾಂಗ್ರೆಸ್ಸಿಗೆ ಸೇರುವ ಮುನ್ನ ಜನತಾ ಪರಿವಾರದ ಮುಖಂಡರಾಗಿದ್ದ ರಾಮನರೇಶ್ ಯಾದವ್ 1977-79 ಅವಧಿಯಲ್ಲಿ ಉತ್ತರ ಪ್ರದೇಶದ ಸಿಎಂ ಆಗಿ ಕಾರ್ಯನಿರ್ವಹಿಸಿದ್ದರು.

ಲಕ್ನೋ(ನ. 22): ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಉತ್ತರಪ್ರದೇಶ ಮುಖ್ಯಮಂತ್ರಿ ರಾಮನರೇಶ್ ಯಾದವ್ ನಿಧನರಾದರು. ದೀರ್ಘಕಾಲ ಅನಾರೋಗ್ಯದಿಂದ ಬಳಲುತ್ತಿದ್ದ ಯಾದವ್(90) ಮಂಗಳವಾರ ಇಲ್ಲಿಯ ಪಿಜಿಐ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸೇರಿದಂತೆ ಹಲವು ಗಣ್ಯರು ರಾಮನರೇಶ್ ಯಾದವ್ ನಿಧನಕ್ಕೆ ಸಂತಾಪ ಸೂಚಿಸಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಾಂಗ್ರೆಸ್ಸಿಗೆ ಸೇರುವ ಮುನ್ನ ಜನತಾ ಪರಿವಾರದ ಮುಖಂಡರಾಗಿದ್ದ ರಾಮನರೇಶ್ ಯಾದವ್ 1977-79 ಅವಧಿಯಲ್ಲಿ ಉತ್ತರ ಪ್ರದೇಶದ ಸಿಎಂ ಆಗಿ ಕಾರ್ಯನಿರ್ವಹಿಸಿದ್ದರು. 2004ರಲ್ಲಿ ಕಾಂಗ್ರೆಸ್'ಗೆ ಪಕ್ಷಾಂತರಗೊಂಡ ಅವರು ಚುನಾವಣೆಯಲ್ಲಿ ಸೋಲನುಭವಿಸಿದರು. 2011ರಲ್ಲಿ ಯುಪಿಎ ಸರಕಾರವು ಈ ಹಿರಿಯ ಮುಖಂಡರನ್ನು ಮಧ್ಯಪ್ರದೇಶದ ರಾಜ್ಯಪಾಲರನ್ನಾಗಿ ನೇಮಿಸಿತ್ತು.