ನವದೆಹಲಿ[ಡಿ.19]: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ವಿವಿಧ ಹಿಂದೂ ಪರ ಸಂಘಟನೆಗಳು ಆಗ್ರಹ ಮಾಡಿದ್ದಾಯ್ತು. ಇದೀಗ ಬಿಜೆಪಿ ಸಂಸದರೇ ಈ ಬಗ್ಗೆ ಸರ್ಕಾರವನ್ನು ನೇರವಾಗಿ ಪ್ರಶ್ನೆ ಮಾಡಿದ್ದಾರೆ.

ಮಂಗಳವಾರ ದೆಹಲಿಯಲ್ಲಿ ನಡೆದ ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಉತ್ತರಪ್ರದೇಶದ ಹಲವು ಬಿಜೆಪಿ ಸಂಸದರು, ರಾಮಮಂದಿರ ನಿರ್ಮಾಣ ಯಾವಾಗ ಮಾಡುತ್ತೀರಿ? ಕ್ಷೇತ್ರದಲ್ಲಿ, ರಾಜ್ಯದಲ್ಲಿ ಈ ಬಗ್ಗೆ ಮತದಾರರಿಂದ ಪ್ರಶ್ನೆಗಳು ತೂರಿಬರುತ್ತಿವೆ. ಈ ಬಗ್ಗೆ ಸ್ಪಷ್ಟಉತ್ತರ ನೀಡಿ ಎಂದು ಕೋರಿದ್ದಾರೆ. ಈ ವೇಳೆ ಸಭೆಯ ಅಧ್ಯಕ್ಷತೆ ವಹಿಸಿದ್ದ ಕೇಂದ್ರ ಸಚಿವ ರಾಜ್‌ನಾಥ್‌ಸಿಂಗ್‌, ರಾಮಮಂದಿರ ನಿರ್ಮಾಣ ಆಗಬೇಕೆಂಬುದು ಎಲ್ಲರ ಬೇಡಿಕೆ. ಆದಕ್ಕೆ ನೀವೆಲ್ಲರೂ ತಾಳ್ಮೆಯಿಂದ ಕಾಯಬೇಕು ಎಂಬ ಸಲಹೆ ನೀಡಿದ್ದಾರೆ.

ಮಂಗಳವಾರದ ಸಭೆಯಲ್ಲಿ ಪ್ರಧಾನಿ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಇಬ್ಬರೂ ಉಪಸ್ಥಿರಲಿಲ್ಲ.