ಯುಪಿಎ ಟೀಕಿಸುವ ಭರದಲ್ಲಿ ತಮ್ಮದೇ ಪಕ್ಷದ ನಾಯಕನನ್ನು ವ್ಯಂಗ್ಯ ಮಾಡಿದ ರಾಮ್ ಮಾಧವ್! ವಿಶ್ವಸಂಸ್ಥೆಯಲ್ಲಿನ ಎಸ್.ಎಂ,. ಕೃಷ್ಣ ಭಾಷಣದ ಕುರಿತು ವ್ಯಂಗ್ಯವಾಡಿದ ರಾಮ್ ಮಾಧವ್! ಭಾರತದ ಭಾಷಣ ಓದುವ ಬದಲು ಪೋರ್ಚುಗಲ್ ಭಾಷಣ ಓದಿದ್ದ ಎಸ್.ಎಂ. ಕೃಷ್ಣ! ಸಾಮಾಜಿಕ ಜಾಲತಾಣದಲ್ಲಿ ಟ್ರೋಲಿಗೊಳಗಾದ ರಾಮ್ ಮಾಧವ್! ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿರುವ ಎಸ್.ಎಂ ಕೃಷ್ಣ
ಹೈದರಾಬಾದ್(ಅ.28): ಹಿಂದೊಮ್ಮೆ ಯುಪಿಎ ಸರ್ಕಾರದಲ್ಲಿ ವಿದೇಶಾಂಗ ಸಚಿವರಾಗಿದ್ದ ಎಸ್ ಎಂ ಕೃಷ್ಣ, ವಿಶ್ವಸಂಸ್ಥೆಯಲ್ಲಿ ತಮ್ಮ ಭಾಷಣ ಓದುವ ಬದಲು ಬೇರೆಯ ದೇಶದ ವಿದೇಶಾಂಗ ಮಂತ್ರಿಗಳ ಭಾಷಣ ಓದಿ ಯಡವಟ್ಟು ಮಾಡಿಕೊಂಡಿದ್ದರು. ಅಂದು ಕಾಂಗ್ರೆಸ್ ನಲ್ಲಿದ್ದ ಎಸ್ ಎಂ ಕೃಷ್ಣ ಈಗ ಬಿಜೆಪಿಯಲ್ಲಿದ್ದಾರೆ.
ಯುಪಿಎ ಸರ್ಕಾರದಲ್ಲಿನ ವೈಫಲ್ಯಗಳನ್ನು ಟೀಕಿಸುವ ಭರದಲ್ಲಿ ಬಿಜೆಪಿ ನಾಯಕ ರಾಮ್ ಮಾಧವ್, ಇಂದು ಪ್ರಧಾನಿ ಮೋದಿ ಹಾಗೂ ಸುಷ್ಮಾ ಸ್ವರಾಜ್ ಜಾಗತಿಕ ಮಟ್ಟದಲ್ಲಿ ಭಾರತದ ಗೌರವವನ್ನು ಹೆಚ್ಚಿಸುವುದಕ್ಕೆ ಶ್ರಮಿಸುತ್ತಿದ್ದಾರೆ, ಆದರೆ ಯುಪಿಎ ಸರ್ಕಾರದಲ್ಲಿದ್ದ ನಮ್ಮ ವಿದೇಶಾಂಗ ಸಚಿವರು ನಮ್ಮ ದೇಶದ ಭಾಷಣ ಓದುವುದನ್ನು ಬಿಟ್ಟು ಬೇರೆಯವರ ಭಾಷಣ ಓದಿ ಮುಜುಗರ ಉಂಟು ಮಾಡಿ, ಹಾಸ್ಯದ ವಸ್ತುವಾಗಿದ್ದರು ಎಂದು ಹೇಳಿ ಯಡವಟ್ಟು ಮಾಡಿಕೊಂಡಿದ್ದಾರೆ.
ಕಾರಣ ರಾಮ್ ಮಾಧವ್ ಅವರು ಯುಪಿಎ ಸರ್ಕಾರವನ್ನು ಟೀಕಿಸಲು ಹೋಗಿ ಎಸ್ ಎಂ ಕೃಷ್ಣ ಅವರು ಮಾಡಿದ್ದ ಯಡವಟ್ಟಿನ ಬಗ್ಗೆ ಲೇವಡಿ ಮಾಡಿದ್ದಾರೆ. ಎಸ್ ಎಂ ಕೃಷ್ಣ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಈಗ ರಾಮ್ ಮಾಧವ್ ಟೀಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ರೆಸ್ಪಾನ್ಸ್ ಬರುತ್ತಿದ್ದು, ಕೃಷ್ಣ ಇದೀಗ ಬಿಜೆಪಿಯಲ್ಲಿರುವುದನ್ನು ಮಾಧವ್ ಮರೆತಿದ್ದಾರೆ ಎಂದು ಟ್ರೋಲಿಗರು ಕಾಲೆಳೆದಿದ್ದಾರೆ.
