ಹೃದಯ ಹಿಂಡುವಂತೆ ನೋವು ತೋಡಿಕೊಂಡರು ರಾಮ್ ಗೋಪಾಲ್ ವರ್ಮಾ

First Published 25, Feb 2018, 8:09 PM IST
Ram Gopal Varma pens Heartwrenching obit on Sridevis Demise
Highlights

ದುಬೈನಲ್ಲಿ ಮದುವೆ ಸಮಾರಂಭಕ್ಕೆ ತೆರಳಿದ್ದ ವೇಳೆ  ಹೃದಯಾಘಾತದಿಂದಾದ ಶ್ರೀ ದೇವಿ ಸಾವು ಎಲ್ಲರಿಗೂ ಆಘಾತವನ್ನುಂಟು ಮಾಡಿದೆ.

ಮುಂಬೈ : ದುಬೈನಲ್ಲಿ ಮದುವೆ ಸಮಾರಂಭಕ್ಕೆ ತೆರಳಿದ್ದ ವೇಳೆ  ಹೃದಯಾಘಾತದಿಂದಾದ ಶ್ರೀ ದೇವಿ ಸಾವು ಎಲ್ಲರಿಗೂ ಆಘಾತವನ್ನುಂಟು ಮಾಡಿದೆ.

ಇದೇ ವೇಳೆ ರಾಮ್ ಗೋಪಾಲ್ ವರ್ಮಾ ಶ್ರೀ ದೇವಿ ನಿಧನಕ್ಕೆ ಅತೀವ ದುಃಖವನ್ನು ತೋಡಿಕೊಂಡಿದ್ದಾರೆ. ನಿಜವಾಗಿಯೂ ಶ್ರೀ ದೇವಿ ಸತ್ತಿದ್ದಾಳೆಯೇ. ಯಾರಾದರು ನನ್ನನ್ನು ಎಚ್ಚರಿಸಿ ಇದೊಂದು ಕೆಟ್ಟ ಕನಸು ಎಂದು ಹೇಳಬಾರದೇ ಎಂದು ಅವರು ಹೇಳಿಕೊಂಡಿದ್ದಾರೆ.

ರಾತ್ರಿ ಎಚ್ಚರವಾದಾಗ ಕೆಲವರಿಗೆ ತಮ್ಮ ಫೋನ್ ನೋಡುವ ಅಭ್ಯಾಸವಿರುತ್ತದೆ. ಅದರಂತೆ ನನಗೂ ಕೂಡ ಅದೇ ರೀತಿಯಾದ ಅಭ್ಯಾಸವಿದ್ದು, ಈ ಸಂದೇಶವನ್ನು ನೋಡಿದೆ. ಆಗ ನನಗೆ ಅನಿಸಿದ್ದು,ಇದೊಂದು ಕೆಟ್ಟ ಕನಸೆಂದು.  ನಂತರ ಮತ್ತೆ ನಾನು ನಿದ್ದೆಗೆ ಜಾರಿದೆ.

ಬಳಿಕ ನಾನು ಎಚ್ಚರವಾದಾಗ ಮತ್ತೆ ಮೊಬೈಲ್ ನೋಡಿದಾಗ ಸುಮಾರು 50 ಮಂದಿ ನನಗೆ ಈ ಬಗ್ಗೆ ಸಂದೇಶವನ್ನು ಕಳಿಸಿದ್ದರು ಎಂದು ಹೇಳಿದ್ದಾರೆ.

ಅಲ್ಲದೇ ಆಕೆಯನ್ನು ಕರೆದುಕೊಂಡು ಹೋದ ದೇವರನ್ನು ನಾನು ಧ್ವೇಷಿಸುತ್ತೇನೆ. ಇಷ್ಟು ಬೇಗ ಕರೆದೊಯ್ದ ಆಕೆಯ ಸಾವನ್ನು ಕೂಡ ಧ್ವೇಷಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

loader