ಇದೇ ವೇಳೆ, ಹಿಂದಿನ ಯುಪಿಎ ಸರ್ಕಾರದ ವಿರುದ್ಧ ಕಿಡಿಕಾರಿದ ಅವರು, ಕಾನೂನಿನ ಮಾನ್ಯತೆ ಇಲ್ಲದೆ ಆಧಾರ್​ ಯೋಜನೆ ಜಾರಿಗೆ ತರಲಾಗಿತ್ತು. ಯುಪಿಎ ಸರ್ಕಾರ ಮಾಡಿದ್ದ ಹುಳುಕುಗಳನ್ನು ಈಗಿನ ಬಿಎಪಿ ಸರ್ಕಾರ ಸರಿಪಡಿಸಿದೆ. ಆಧಾರ್​ ಯೋಜನೆಗಾಗಿ ಯುಪಿಎ ಸರ್ಕಾರ ಸಾವಿರಾರು ಕೋಟಿ ಹಣ ಖರ್ಚು ಮಾಡಿತ್ತು. ಈ ಯೋಜನೆಯ ಬಗ್ಗೆ ಸಂಸತ್ತಿನಲ್ಲಿ ಯಾವ ಚರ್ಚೆಯೂ ನಡೆದಿರಲಿಲ್ಲ ಅಂತ ರಾಜೀವ್ ಆರೋಪಿಸಿದರು.

ನವದೆಹಲಿ(ಏ.10): ಯುಪಿಎ ಸರ್ಕಾರದ ಅವಧಿಯಲ್ಲಿ ಆಧಾರ್ ಬಯೋಮೆಟ್ರಿಕ್​ ಮಾಹಿತಿ ಸಂಗ್ರಹದಲ್ಲಿ ಲೋಪವಾಗಿದೆ ಎಂದು ಸಂಸದ ರಾಜೀವ್ ಚಂದ್ರಶೇಖರ್ ಆರೋಪಿಸಿದ್ದಾರೆ.

2010ರಿಂದ 2015ರ ವರೆಗೆ ನಡೆದ ಆಧಾರ್ ಬಯೋಮೆಟ್ರಿಕ್​ ಮಾಹಿತಿ ಸಂಗ್ರಹದ ಲೋಪಗಳ ಬಗ್ಗೆ ರಾಜ್ಯಸಭೆಯಲ್ಲಿ ಮಾತನಾಡಿದ ಸಂಸದ ರಾಜೀವ್ ಚಂದ್ರಶೇಖರ್​, ಈ ಮಾಹಿತಿಯ ಸಂಗ್ರಹದಲ್ಲೇ ಹಲವು ಲೋಪಗಳಿವೆ. ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾಗಿದೆ ಅಂತ ಸಂಸತ್ತಿನ ಗಮನಸೆಳೆದರು.

ಇದೇ ವೇಳೆ, ಹಿಂದಿನ ಯುಪಿಎ ಸರ್ಕಾರದ ವಿರುದ್ಧ ಕಿಡಿಕಾರಿದ ಅವರು, ಕಾನೂನಿನ ಮಾನ್ಯತೆ ಇಲ್ಲದೆ ಆಧಾರ್​ ಯೋಜನೆ ಜಾರಿಗೆ ತರಲಾಗಿತ್ತು. ಯುಪಿಎ ಸರ್ಕಾರ ಮಾಡಿದ್ದ ಹುಳುಕುಗಳನ್ನು ಈಗಿನ ಬಿಎಪಿ ಸರ್ಕಾರ ಸರಿಪಡಿಸಿದೆ. ಆಧಾರ್​ ಯೋಜನೆಗಾಗಿ ಯುಪಿಎ ಸರ್ಕಾರ ಸಾವಿರಾರು ಕೋಟಿ ಹಣ ಖರ್ಚು ಮಾಡಿತ್ತು. ಈ ಯೋಜನೆಯ ಬಗ್ಗೆ ಸಂಸತ್ತಿನಲ್ಲಿ ಯಾವ ಚರ್ಚೆಯೂ ನಡೆದಿರಲಿಲ್ಲ ಅಂತ ರಾಜೀವ್ ಆರೋಪಿಸಿದರು.

ಸರ್ಕಾರ ಆಧಾರ್ ಗೌಪ್ಯತೆ,ಭದ್ರತೆ ಹಾಗೂ ಪ್ರಮಾಣಿಕೃತೆಯ ಬಗ್ಗೆ ಹೆಚ್ಚು ಗಮನಹರಿಸಬೇಕಾದ ಅಗತ್ಯವಿದೆ ಎಂದು ತಿಳಿಸಿದರು.