ಎನ್‌ಡಿಎಗೆ ರಾಜು ಶೆಟ್ಟಿ ಗುಡ್‌ಬೈ

Raju Shetty Good By To NDA
Highlights

ಎನ್‌ಡಿಎ ಮೈತ್ರಿಕೂಟಕ್ಕೆ ಟಿಡಿಪಿ ಗುಡ್‌ಬೈ ಹೇಳಿದ ಬೆನ್ನಲ್ಲೇ, ಮಹಾರಾಷ್ಟ್ರದ ಸ್ವಾಭಿಮಾನಿ ಪಕ್ಷದ ನಾಯಕ ರಾಜು ಶೆಟ್ಟಿ, ಎನ್‌ಡಿಎಗೆ ಗುಡ್‌ಬೈ ಹೇಳಿದ್ದಾರೆ.

ನವದೆಹಲಿ: ಎನ್‌ಡಿಎ ಮೈತ್ರಿಕೂಟಕ್ಕೆ ಟಿಡಿಪಿ ಗುಡ್‌ಬೈ ಹೇಳಿದ ಬೆನ್ನಲ್ಲೇ, ಮಹಾರಾಷ್ಟ್ರದ ಸ್ವಾಭಿಮಾನಿ ಪಕ್ಷದ ನಾಯಕ ರಾಜು ಶೆಟ್ಟಿ, ಎನ್‌ಡಿಎಗೆ ಗುಡ್‌ಬೈ ಹೇಳಿದ್ದಾರೆ.

ಸೋಮವಾರ ಇಲ್ಲಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಬೆನ್ನಲ್ಲೇ ರಾಜು ಶೆಟ್ಟಿಈ ನಿರ್ಧಾರ ಪ್ರಕಟಿಸಿದ್ದಾರೆ. ಹಾಲಿ ಎನ್‌ಡಿಎ ಮೈತ್ರಿಕೂಟದ ಭಾಗವಾಗಿದ್ದ ಸ್ವಾಭಿಮಾನಿ ಪಕ್ಷದ ಏಕೈಕ ಸಂಸದ ರಾಜು ಶೆಟ್ಟಿ ಅವರು.

ಶನಿವಾರ ಮುಕ್ತಾಯಗೊಂಡ ಎಐಸಿಸಿ ಅಧಿವೇಶನದಲ್ಲಿ ಮಾತನಾಡಿದ್ದ ರಾಹುಲ್‌ ಗಾಂಧಿ, ಮುಂದಿನ ದಿನಗಳಲ್ಲಿ ಪಕ್ಷ ರೈತರ ಸಮಸ್ಯೆ ನೀಗಿಸಲು ಯತ್ನಿಸುವುದಾಗಿ ಹೇಳಿದ ಬೆನ್ನಲ್ಲೇ ರಾಜು ಶೆಟ್ಟಿ, ರಾಹುಲ್‌ರನ್ನು ಭೇಟಿಯಾಗಿದ್ದರು. ಜೊತೆಗೆ 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಜೊತೆ ಮೈತ್ರಿಯ ಸುಳಿವನ್ನೂ ನೀಡಿದ್ದಾರೆ.

loader