ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಬಹುತಾರಾಂಗಣದ ಚಿತ್ರದಲ್ಲಿ ದೀಪಿಕಾ ಪಡುಕೋಣೆ, ಶಾಹಿದ್ ಕಫೂರ್, ರಣವೀರ್ ಸಿಂಗ್ ಮುಂತಾದವರು ಅಭಿನಯಿಸಿದ್ದಾರೆ.  

ಬೆಂಗಳೂರು(ನ.15): ಐತಿಹಾಸಿಕ ಕಥಾ ಹಂದರವಿರುವ ಬಾಲಿವುಡ್'ನ ಬಹು ನಿರೀಕ್ಷಿತ ಪದ್ಮಾವತಿ ಚಿತ್ರಕ್ಕೆ ದೇಶದ ವಿವಿದೆಡೆ ಪ್ರತಿಭಟನೆ ನಡೆಯುತ್ತಿದೆ. ಅದರ ಬಿಸಿ ಈಗ ಕರ್ನಾಟಕಕ್ಕೂ ತಟ್ಟಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಬಹುತಾರಾಂಗಣದ ಚಿತ್ರದಲ್ಲಿ ದೀಪಿಕಾ ಪಡುಕೋಣೆ, ಶಾಹಿದ್ ಕಫೂರ್, ರಣವೀರ್ ಸಿಂಗ್ ಮುಂತಾದವರು ಅಭಿನಯಿಸಿದ್ದಾರೆ.

ಇಂದು ಬೆಂಗಳೂರಿನಲ್ಲಿಯೂ ಪದ್ಮಾವತಿ ಚಿತ್ರ ಬಿಡುಗಡೆ ವಿರೋಧ ವ್ಯಕ್ತಪಡಿಸಲಾಗಿದೆ. ಪದ್ಮಾವತಿ ಬಿಡುಗಡೆಗೆ ಬೆಂಗಳೂರಿನಲ್ಲಿ ಬೃಹತ್ ರ್ಯಾಲಿ ನಡೆಸಲಾಯಿತು. ರಜಪೂತ್ ಕರ್ಣಿಸೇನಾ ಕರ್ನಾಟಕ ಸಂಘಟನೆಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಟೌನ್ ಹಾಲ್'ನಿಂದ ಆರಂಭಗೊಂಡ ಪ್ರತಿಭಟನೆ ಫ್ರೀಡಂ ಪಾರ್ಕವರೆಗೆ ನಡೆಯಿತು. ಅಲ್ಲಾವುದ್ದೀನ್ ಖಿಲ್ಜಿ ಒಬ್ಬ ದಾಳಿಕೋರನಷ್ಟೇ , ಪದ್ಮಾವತಿ ಯಾವತ್ತೂ ನೃತ್ಯ ಮಾಡಿರಲಿಲ್ಲ’, ‘ಕರ್ನಾಟಕದಲ್ಲಿ ಪದ್ಮಾವತಿ ರಿಲೀಸ್​​​ ಆಗಲು ಬಿಡಲ್ಲ’ ಎಂದು ರಾಷ್ಟ್ರೀಯ ರಜಪೂತ್ ಕರ್ಣಿ ಸೇನಾ ಸಂಘಟನೆ ಹೇಳಿದೆ .

ನಿನ್ನೆಯಷ್ಟೇ ರಾಜಸ್ಥಾನದ ಕೋಟ್ಲಾದಲ್ಲಿ ಪದ್ಮಾವತಿ ಟ್ರೈಲರ್ ಪ್ರದರ್ಶನ ಮಾಡುತ್ತಿದ್ದ ಸಿನಿಮಾ ಮಂದಿರದ ಮೇಲೆ ರಜಪೂತ ಕರ್ಣಿಸೇನಾ ಸಂಘಟನೆಯು ದಾಳಿ ನಡೆಸಿತ್ತು.