ಸ್ಟೇಟ್ ಬ್ಯಾಂಕ್ ಆಫಿ ಇಂಡಿಯಾದ ಮುಂದಿನ ಚೇರ್’ಮನ್ ಆಗಿ ರಜನೀಶ್ ಕುಮಾರ್  ನೇಮಕವಾಗಿದ್ದಾರೆ. ಹಾಲಿ ಚೇರ್’ಮನ್ ಆಗಿರುವ ಅರುಂಧತಿ ಭಟ್ಟಾಚಾರ್ಯ ಅಧಿಕಾರಾವಧಿ ಇದೇ ಶುಕ್ರವಾರದಂದು ಕೊನೆಗೊಳ್ಳಲಿದ್ದು ರಜನೀಶ್ ಕುಮಾರ್ ಮುಂದಿನ ಚೇರ್’ಮನ್ ಆಗಲಿದ್ದಾರೆ.

ನವದೆಹಲಿ (ಅ.04): ಸ್ಟೇಟ್ ಬ್ಯಾಂಕ್ ಆಫಿ ಇಂಡಿಯಾದ ಮುಂದಿನ ಚೇರ್’ಮನ್ ಆಗಿ ರಜನೀಶ್ ಕುಮಾರ್ ನೇಮಕವಾಗಿದ್ದಾರೆ. ಹಾಲಿ ಚೇರ್’ಮನ್ ಆಗಿರುವ ಅರುಂಧತಿ ಭಟ್ಟಾಚಾರ್ಯ ಅಧಿಕಾರಾವಧಿ ಇದೇ ಶುಕ್ರವಾರದಂದು ಕೊನೆಗೊಳ್ಳಲಿದ್ದು ರಜನೀಶ್ ಕುಮಾರ್ ಮುಂದಿನ ಚೇರ್’ಮನ್ ಆಗಲಿದ್ದಾರೆ.

ಬ್ಯಾಂಕ್ ನೇಮಕ ಸಮಿತಿ ರಜನೀಶ್ ಕುಮಾರ್’ರವರನ್ನು 3 ವರ್ಷಗಳ ಕಾಲ ಚೇರ್’ಮನ್ ಆಗಿ ನೇಮಕ ಮಾಡಿದೆ. ಅ.07 ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ರಜನೀಶ್ ಕುಮಾರ್ ಮೇ. 06 ರಂದು ಎಸ್’ಬಿಐ ಮಂಡಳಿಯನ್ನು ಸೇರಿದ್ದಾರೆ. ಇವರು ಬೇರೆ ಬೇರೆ ಉನ್ನತ ಹುದ್ದೆಗಳನ್ನು ನಿಭಾಯಿಸಿದ್ದು, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿದ್ದಾರೆ.