ಪ್ಯಾರಿಸ್[ಅ.08]: ಭಾರತದ ಸುಮಾರು 20 ವರ್ಷಗಳ ಕನಸು ನನಸಾಗಲು ಕ್ಷಣಗಣನೆ ಆರಂಭವಾಗಿದೆ. ಬಹು ವಿವಾದಿತ ರಫೇಲ್ ಯುದ್ಧ ವಿಜಯ ದಶಮಿಯಂದೇ ಭಾರತೀಯ ಸೇನೆಗೆ ಸೇರ್ಪಡೆಗೊಳ್ಳಲಿದ್ದು, ಇದು ಭಾರತೀಯ ವಾಯುಸೇನೆಗೆ ನೂರಾನೆ ಬಲ ನೀಡಲಿದೆ. ರಫೇಲ್ ವಿಮಾನವನ್ನು ಸ್ವೀಕರಿಸಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಫ್ರಾನ್ಸ್ ನ ಪ್ಯಾರಿಸ್ ಗೆ ತೆರಳಿದ್ದು, ಅದ್ಧೂರಿ ಕಾರ್ಯಕ್ರಮದಲ್ಲಿ ಇದನ್ನು ಸ್ವೀಕರಿಸಲಿದ್ದಾರೆ. 

ಬಹುವಿವಾದಿತ ರಫೇಲ್ 12 ವರ್ಷದ ನಂತರ ಕೊನೆಗೂ ಇಂಡಿಯಾಕ್ಕೆ ಲಭ್ಯ

ವಿಜಯ ದಶಮಿ ಹಾಗೂ 87ನೇ ವಾಯುಸೇನಾ ದಿನದಂದೇ ಭಾರತ ರಫೇಲ್ ಸ್ವೀಕರಿಸುತ್ತಿರುವುದು ಮತ್ತೊಂದು ವಿಶೇಷವಾಗಿದೆ. RB-01 ಹೆಸರಿನ ರಫೇಲ್ ಫೈಟರ್ ಜೆಟ್ ಫ್ರಾನ್ಸ್ ಭಾರತಕ್ಕೆ ಹಸ್ತಾಂತರಿಸುವ 36 ಯುದ್ಧ ವಿಮಾನಗಳಲ್ಲಿ ಮೊದಲನೆಯದ್ದು. RB-01 ಅಂದರೆ ಏರ್ ಮಾರ್ಷಲ್[ವಾಯುಸೇನಾ ಮುಖ್ಯಸ್ಥ] ಆರ್. ಕೆ. ಎಸ್ ಬಾದೌರಿಯಾ ಹೆಸರಿನ ಇನಿಶಿಯಲ್. ಅವರು ಭಾರತ  ಹಾಗೂ ಫ್ರಾನ್ಸ್ ನಡುವಿನ ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದದಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

ವಾಯುಸೇನೆ ಮುಖ್ಯಸ್ಥರಾಗಿ RKS ಬದೌರಿಯಾ ಅಧಿಕಾರ ಸ್ವೀಕಾರ!

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ಯಾರಿಸ್‌ನಲ್ಲಿ ರಫೇಲ್ ಯುದ್ಧ ವಿಮಾನ ಸ್ವೀಕರಸಿದ ಬಳಿಕ ಆಯುಧ ಪೂಜೆ ನೆರವೇರಿಸಲಿದ್ದಾರೆ. ಅಲ್ಲದೇ ಪ್ಯಾರಿಸ್ ವಾಯುನೆಲೆಯಿಂದ ಈ ಯುದ್ಧ ವಿಮಾನದಲ್ಲಿ ಮೊದಲ ಹಾರಾಟ ನಡೆಸಲಿದ್ದಾರೆ. 36 ರಫೇಲ್ ಯುದ್ಧ ವಿಮಾನಗಳಲ್ಲಿ ಮೊದಲ ವಿಮಾನ ಇಂದು ಭಾರತಕ್ಕೆ ಸಿಕ್ಕರೆ, ನಾಲ್ಕು ವಿಮಾನಗಳು 2020ರ ಮೇ ಅಂತ್ಯಕ್ಕೆ ಸಿಗಲಿವೆ.

ರಫೇಲ್ ವಿಶೇಷತೆ ಏನು?

9,545 ಕೆ.ಜಿ ಭಾರ ಸಾಗಿಸುವ ಸಾಮರ್ಥ್ಯ ರಫೇಲ್ ವಿಮಾನಕ್ಕಿದೆ

60,000 ಅಡಿ ಮೇಲಕ್ಕೆ ಹಾರುವ ಸಾಮರ್ಥ್ಯ ರಫೇಲ್ ಹೊಂದಿದೆ

ವೇಗದ ವಿಮಾನ ರಫೇಲ್, ನಿಮಿಷದಲ್ಲೇ 60 ಸಾವಿರ ಅಡಿ ಮೇಲಕ್ಕೆ ಏರುತ್ತೆ

ಖಾಲಿ ಇದ್ದಾಗ ಇದರ ತೂಕ 24,600 ಕೆ.ಜಿ ತೂಕವಷ್ಟೆ ಇರುತ್ತೆ

ಒಟ್ಟು ಉದ್ದ 15.30 ಮೀ. ಗಂಟೆಗೆ ಗರಿಷ್ಟ ವೇಗ 1389 ಕಿ.ಮೀ

ವೈರಿಯ ಚಲನವಲನ ಸುಲಭವಾಗಿ ಗುರುತಿಸುತ್ತೆ ರಫೇಲ್ ವಿಮಾನ

300 ಕಿ.ಮೀ ದೂರದ ಗುರಿಯ ಮೇಲೆ ದಾಳಿ ಮಾಡಬಲ್ಲದು

ದಸರಾದಂದು ಭಾರತಕ್ಕೆ ‘ರಫೇಲ್‌’ ಯುದ್ಧ ವಿಮಾನ ಹಸ್ತಾಂತರ