ನವದೆಹಲಿ(ಜ.16): ಸಾಮೂಹಿಕ ಮತಾಂತರ ಭಾರತಕ್ಕೆ ಕಳವಳದ ವಿಷಯವಾಗಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ. ಸಾಮೂಹಿಕ ಮತಾಂತರದ ಕುರಿತು ಪರಿಶೀಲನೆಯ ಅಗತ್ಯವಿದೆ ಎಂದಿರುವ ರಾಜನಾಥ್, ಹಿಂದುಗಳು ಹಿಂದುಗಳಾಗಿ, ಮುಸ್ಲಿಮರು ಮುಸ್ಲಿಮರಾಗಿ ಹಾಗೂ ಕ್ರಿಶ್ಚಿಯನ್ನರು ಕ್ರಿಶ್ಚಿಯನ್ನರಾಗಿ ಬಾಳಿದರೆ ಚೆಂದ ಅಲ್ಲವೇ ಎಂದು ಪ್ರಶ್ನಿಸಿದ್ದಾರೆ.  

ಕ್ರೈಸ್ತ ಸಂಘಟನೆಯೊಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಂಗ್‌, ‘ನೀವು ಹಿಂದೂ ಆಗಿದ್ದರೆ ಹಿಂದೂ ಆಗಿಯೇ ಇರಿ. ಮುಸ್ಲಿಂ ಆಗಿದ್ದರೆ ಮುಸ್ಲಿಂ ಆಗಿಯೇ ಇರಿ. ಕ್ರಿಶ್ಚಿಯನ್‌ ಆಗಿದ್ದರೆ ಕ್ರಿಶ್ಚಿಯನ್‌ ಆಗಿಯೇ ಇರಿ. ನೀವು ಇಡೀ ಪ್ರಪಂಚವನ್ನೇ ಪರಿವರ್ತನೆ ಮಾಡಲು ಏಕೆ ಬಯಸುತ್ತೀರಿ? ಎಂದು ಪ್ರಶ್ನಿಸಿದ್ದಾರೆ.

ಯಾರಾದರೊಬ್ಬರು ಒಂದು ಧರ್ಮವನ್ನು ಸ್ವೀಕರಿಸಲು ಬಯಸಿದರೆ ಅದು ಅವರ ಸ್ವಾತಂತ್ರ. ಆದರೆ ಆದರೆ ಸಾಮೂಹಿಕ ಮತಪರಿವರ್ತನೆ ನಡೆಯುತ್ತಿದ್ದರೆ, ಹೆಚ್ಚಿನ ಸಂಖ್ಯೆಯ ಜನರು ತಮ್ಮ ಧರ್ಮವನ್ನು ಬದಲಿಸಲು ಪ್ರಾರಂಭಿಸಿದರೆ, ಅದು ಯಾವುದೇ ದೇಶಕ್ಕಾದರೂ ಕಳವಳದ ವಿಷಯವಾಗುತ್ತದೆ. ಎಂದು ರಾಜನಾಥ್ ಹೇಳಿದರು.