ನೆರೆರಾಷ್ಟ್ರವೊಂದು ಭಾರತದ ಮೇಲೆ ದಾಳಿ ಮಾಡಲು ಭಯೋತ್ಪಾದನೆಗೆ ಬೆಂಬಲ ನೀಡುತ್ತಿದೆ. ಆದರೆ ನಮ್ಮ ಸರ್ಕಾರ ಇತರ ದೇಶಗಳೆದುರು ತಲೆತಗ್ಗಿಸಲು ಬಿಡುವುದಿಲ್ಲ ಎಂದು ರಾಜ್'ನಾಥ್ ಸಿಂಗ್ ಪಾಕಿಸ್ತಾನದ ಹೆಸರು ಪ್ರಸ್ತಾಪಿಸದೇ ವಾಗ್ದಾಳಿ ನಡೆಸಿದ್ದಾರೆ.

ರಾಯ್'ಪುರ(ನ.06): ನೆರೆಯ ರಾಷ್ಟ್ರವೊಂದು ಭಯೋತ್ಪಾದನೆಗೆ ಪ್ರಚೋದನೆ ನೀಡುತ್ತಾ ಭಾರತವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅದಕ್ಕೆ ಅವಕಾಶ ನೀಡುವುದಿಲ್ಲ ಎಂದು ಗೃಹಸಚಿವ ರಾಜ್'ನಾಥ್ ಸಿಂಗ್ ಹೇಳಿದ್ದಾರೆ.

ನೆರೆರಾಷ್ಟ್ರವೊಂದು ಭಾರತದ ಮೇಲೆ ದಾಳಿ ಮಾಡಲು ಭಯೋತ್ಪಾದನೆಗೆ ಬೆಂಬಲ ನೀಡುತ್ತಿದೆ. ಆದರೆ ನಮ್ಮ ಸರ್ಕಾರ ಇತರ ದೇಶಗಳೆದುರು ತಲೆತಗ್ಗಿಸಲು ಬಿಡುವುದಿಲ್ಲ ಎಂದು ರಾಜ್'ನಾಥ್ ಸಿಂಗ್ ಪಾಕಿಸ್ತಾನದ ಹೆಸರು ಪ್ರಸ್ತಾಪಿಸದೇ ವಾಗ್ದಾಳಿ ನಡೆಸಿದ್ದಾರೆ.

ನಮ್ಮ ದೇಶದ ನಿರಂತರ ಪ್ರಗತಿಯನ್ನು ಸಹಿಸದ ಕೆಲವು ದೇಶಗಳು ಹಿಂಬಾಗಿಲಿನ ಮೂಲಕ ಭಯೋತ್ಪಾದಕರನ್ನು ಭಾರತದ ಮೇಲೆ ಎತ್ತಿಕಟ್ಟುವ ಮೂಲಕ ದೇಶವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿವೆ.

ಉರಿಯಲ್ಲಿ ಹೇಡಿಗಳ ರೀತಿ ನಮ್ಮ ಸೈನಿಕರ ಮೇಲೆ ದಾಳಿ ಮಾಡಿ ಹತ್ಯೆ ಮಾಡಿದರು. ಆದರೆ ನಮ್ಮ ಸೈನಿಕರು ಸರ್ಜಿಕಲ್ ದಾಳಿ ನಡೆಸುವ ಮೂಲಕ ತಕ್ಕ ಪ್ರತ್ಯುತ್ತರವನ್ನೇ ನೀಡಿದ್ದಾರೆ. ನಮ್ಮ ದೇಶ ಯಾವತ್ತಿಗೂ ಇತರರೆದುರು ತಲೆ ಕೆಳಗಾಗದಂತೆ ನೋಡಿಕೊಳ್ಳುತ್ತೇವೆ ಎಂದು ಹೇಳಿದರು.