ದೊಡ್ಡಗಾಜನೂರು.. ಡಾ.ರಾಜ್ ಕುಮಾರ್ ಅವರ ಹುಟ್ಟೂರು ಈ ಗ್ರಾಮದಲ್ಲೇ ರಾಜ್ ಅವರ ಮನೆ ಹಾಗೂ ಸುಮಾರು 30 ಎಕರೆ ಜಮೀನು ಇತ್ತು. ಇದೀಗ ಅಣ್ಣಾವ್ರ ಮಕ್ಕಳು ಈ ಆಸ್ತಿಯನ್ನು ಹಂಚಿಕೊಂಡಿದ್ದಾರೆ.. ರಾಜ್​ಕುಮಾರ್ ಮಕ್ಕಳಾದ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್​ಕುಮಾರ್, ಪುನೀತ್ ರಾಜ್ ಕುಮಾರ್ ಹಾಗೂ ಹೆಣ್ಮಕ್ಕಳಾದ ಪೂರ್ಣಿಮಾ ಹಾಗೂ ಲಕ್ಷ್ಮಿ ಸಹಮತದಿಂದ ಜಮೀನು ಹಂಚಿಕೊಂಡಿದ್ದಾರೆ. ತಾಳವಾಡಿಯ ನೋಂದಣಾಧಿಕಾರಿ ಕಚೇರಿಯಲ್ಲಿ ನಿನ್ನೆ ಆಸ್ತಿ ನೋಂದಣಿ ಸಹ ನಡೆಯಿತು

ಬೆಂಗಳೂರು(ಅ.18): ಚಾಮರಾಜನಗರ ಸಮೀಪದ ತಮಿಳುನಾಡಿನ ತಾಳವಾಡಿ ಫಿರ್ಕಾದ ದೊಡ್ಡಗಾಜನೂರಿನಲ್ಲಿದ್ದ ವರನಟ ಡಾ.ರಾಜ್ ಕುಮಾರ್ ಅವರ ಪಿತ್ರಾರ್ಜಿತ ಆಸ್ತಿಯನ್ನು ಅವರ ಐವರ ಮಕ್ಕಳು ಒಮ್ಮತದಿಂದ ಹಂಚಿಕೊಂಡಿದ್ದಾರೆ.

ದೊಡ್ಡಗಾಜನೂರು.. ಡಾ.ರಾಜ್ ಕುಮಾರ್ ಅವರ ಹುಟ್ಟೂರು ಈ ಗ್ರಾಮದಲ್ಲೇ ರಾಜ್ ಅವರ ಮನೆ ಹಾಗೂ ಸುಮಾರು 30 ಎಕರೆ ಜಮೀನು ಇತ್ತು. ಇದೀಗ ಅಣ್ಣಾವ್ರ ಮಕ್ಕಳು ಈ ಆಸ್ತಿಯನ್ನು ಹಂಚಿಕೊಂಡಿದ್ದಾರೆ.. ರಾಜ್​ಕುಮಾರ್ ಮಕ್ಕಳಾದ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್​ಕುಮಾರ್, ಪುನೀತ್ ರಾಜ್ ಕುಮಾರ್ ಹಾಗೂ ಹೆಣ್ಮಕ್ಕಳಾದ ಪೂರ್ಣಿಮಾ ಹಾಗೂ ಲಕ್ಷ್ಮಿ ಸಹಮತದಿಂದ ಜಮೀನು ಹಂಚಿಕೊಂಡಿದ್ದಾರೆ. ತಾಳವಾಡಿಯ ನೋಂದಣಾಧಿಕಾರಿ ಕಚೇರಿಯಲ್ಲಿ ನಿನ್ನೆ ಆಸ್ತಿ ನೋಂದಣಿ ಸಹ ನಡೆಯಿತು.

ಯಾರಿಗೆ ಎಷ್ಟೆಷ್ಟು ಆಸ್ತಿ..?: ರಾಜ್ ಕುಮಾರ್ ತಂದೆ ಪುಟ್ಟಸ್ವಾಮಯ್ಯನವರ ಹೆಸರಿನಲ್ಲಿದ್ದ 3.5 ಎಕರೆ ಜಮೀನನ್ನು ಶಿವರಾಜ್ ಕುಮಾರ್, ರಾಜ್ ಅವರ ತಾಯಿ ಲಕ್ಷ್ಮಮ್ಮ ಹೆಸರಿನಲ್ಲಿದ್ದ 11.5 ಎಕರೆ ಜಮೀನನ್ನು ಪುನೀತ್ ರಾಜ್ ಕುಮಾರ್, ರಾಜ್ ಪತ್ನಿ ಪಾರ್ವತಮ್ಮ ಹೆಸರಿನಲ್ಲಿದ್ದ 5.5 ಎಕರೆ ಜಮೀನನ್ನು ರಾಘವೇಂದ್ರ ರಾಜ್ ಕುಮಾರ್ ತಮ್ಮ ತಮ್ಮ ಹೆಸರಿಗೆ ನೋಂದಣಿ ಮಾಡಿಸಿಕೊಂಡರು. ಇದಲ್ಲದೇ ರಾಜ್ ಪುತ್ರಿಯರಾದ ಪೂರ್ಣಿಮಾ 3.5 ಎಕರೆ ಜಮೀನನ್ನು, ಲಕ್ಷ್ಮಿ ಅವರು 6.5 ಎಕರೆ ಜಮೀನನ್ನು ತಮ್ಮ ಹೆಸರಿಗೆ ಖಾತೆ ಮಾಡಿಸಿಕೊಂಡಿದ್ದಾರೆ.

ಇತ್ತೀಚೆಗೆ ಆಸ್ತಿ ಹಂಚಿಕೆಯಲ್ಲಿ ಅಣ್ಣ-ತಮ್ಮಂದಿರ ಮಧ್ಯೆ ಗೊಂದಲಗಳು ನಡೆಯೋದು ಸಾಮಾನ್ಯ.. ಆದರೆ, ಡಾ ರಾಜ್ ಮಕ್ಕಳು ಇದಕ್ಕೆ ಆಸ್ಪದ ಕೊಡದೇ ಎಲ್ಲರೂ ಒಟ್ಟಿಗೆ ಕುಳಿತು ಪರಸ್ಪರ ಹೊಂದಾಣಿಕೆಯಿಂದ ಆಸ್ತಿ ಹಂಚಿಕೊಳ್ಳುವ ಮೂಲಕ ಮಾದರಿಯಾದರು.

ಚಾಮರಾಜನಗರದಿಂದ ಶಶಿಧರ ಕೆ.ವಿ.ಸುವರ್ಣ ನ್ಯೂಸ್