ಎಲ್​ಟಿಟಿಇ ಮತ್ತು ಲಂಕಾ ಸೇನೆ ನಡುವಿನ ಯುದ್ಧದಲ್ಲಿ ನಿರಾಶ್ರಿತರಾದ ತಮಿಳರಿಗೆ 22 ಕೋಟಿ ರೂ. ವೆಚ್ಚದಲ್ಲಿ ಜ್ಞಾನಂ ಸೇವಾ ಸಂಸ್ಥೆ 160 ಮನೆಗಳನ್ನು ನಿರ್ಮಿಸಿದೆ.

ಚೆನ್ನೈ(ಮಾ.24): ತಮಿಳುನಾಡು ಸೂಪರ್​ಸ್ಟಾರ್ ರಜನಿಕಾಂತ್ ಮತ್ತೊಂದು ವಿವಾದಕ್ಕೆ ಸಿಲುಕಿದ್ದಾರೆ. ಶ್ರೀಲಂಕಾ ಪ್ರವಾಸ ಕೈಗೊಳ್ಳಲಿರುವ ರಜನಿಕಾಂತ್ ವಿರುದ್ಧ ಅಭಿಮಾನಿಗಳ ಆಕ್ರೋಶಗೊಂಡಿದ್ದಾರೆ. ನಿರಾಶ್ರಿತ ತಮಿಳರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿರುವ ಶ್ರೀಲಂಕಾಗೆ ಭೇಟಿ ನೀಡದಂತೆ ಅಭಿಮಾನಿಗಳು ಆಗ್ರಹಿಸಿದ್ದಾರೆ. ಏಪ್ರಿಲ್ 9ರಂದು ಶ್ರೀಲಂಕಾದ ಜಾಫ್ನಾಗೆ ರಜನಿಕಾಂತ್ ಭೇಟಿ ನೀಡಲಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಎಲ್​ಟಿಟಿಇ ಮತ್ತು ಲಂಕಾ ಸೇನೆ ನಡುವಿನ ಯುದ್ಧದಲ್ಲಿ ನಿರಾಶ್ರಿತರಾದ ತಮಿಳರಿಗೆ 22 ಕೋಟಿ ರೂ. ವೆಚ್ಚದಲ್ಲಿ ಜ್ಞಾನಂ ಸೇವಾ ಸಂಸ್ಥೆ 160 ಮನೆಗಳನ್ನು ನಿರ್ಮಿಸಿದೆ. ಈ ಮನೆಗಳನ್ನು ರಜನಿಕಾಂತ್ ವಿತರಿಸಲಿದ್ದಾರೆ. ಬಳಿಕ ಜನರನ್ನುದ್ದೇಶಿಸಿ ಭಾಷಣ ಮಾಡುವ ಕಾರ್ಯಕ್ರಮವೂ ನಿಗದಿಯಾಗಿದೆ. ಇದೀಗ, ರಜನಿಕಾಂತ್ ಲಂಕಾ ಭೇಟಿಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಆದರೆ ಇದಾವುದರ ಬಗ್ಗೆಯೂ ರಜನಿಕಾಂತ್ ಇಲ್ಲಿಯವರೆಗೂ ಪ್ರತಿಕ್ರಿಯೆ ನೀಡಿಲ್ಲ.