ಬಿಡುಗಡೆಗೂ ಮುನ್ನವೇ ಸೋರಿಕೆಯಾಯ್ತು ರಜಿನಿ ಅಭಿನಯದ ಕಾಲಾ ಚಿತ್ರ

Rajinikanths Kaala leaked
Highlights

ಬಹುನಿರೀಕ್ಷಿತ ಚಿತ್ರ ಸೂಪರ್ ಸ್ಟಾರ್ ರಜಿನಿಕಾಂತ್ ಅಭಿನಯಿಸಿದ  ಚಲನ ಚಿತ್ರ ಕಾಲಾ ಬಿಡುಗಡೆಗೆ ಮುನ್ನವೇ ಎಲ್ಲೆಡೆ ವೈರಲ್ ಆಗಿದೆ. ಎಲ್ಲರ ಮೊಬೈಲ್ ಫೋನ್’ನಲ್ಲಿ ಚಿತ್ರವು ಹರಿದಾಡುತ್ತಿದೆ.

ಕೋಲಾರ:  ಬಹುನಿರೀಕ್ಷಿತ ಚಿತ್ರ ಸೂಪರ್ ಸ್ಟಾರ್ ರಜಿನಿಕಾಂತ್ ಅಭಿನಯಿಸಿದ  ಚಲನ ಚಿತ್ರ ಕಾಲಾ ಬಿಡುಗಡೆಗೆ ಮುನ್ನವೇ ಎಲ್ಲೆಡೆ ವೈರಲ್ ಆಗಿದೆ. ಎಲ್ಲರ ಮೊಬೈಲ್ ಫೋನ್’ನಲ್ಲಿ ಚಿತ್ರವು ಹರಿದಾಡುತ್ತಿದೆ.

ಚಿತ್ರದ ನಿರ್ಮಾಪಕರು, ನಿರ್ದೇಶಕರು ಚಿತ್ರ ಸೋರಿಕೆಯಾದ ಬಗ್ಗೆ ತನಿಖೆ ನಡೆಸಬೇಕು ಎಂದು ಸೈಬರ್ ಕ್ರೈಂಗೆ ಮನವಿ ಮಾಡಿದ್ದಾರೆ. ಅಲ್ಲದೇ ಚಿತ್ರವನ್ನು ಯಾರು ವೈರಲ್ ಮಾಡಿದ್ದು ಎನ್ನುವುದನ್ನು ಪತ್ತೆ ಮಾಡಿ ಶಿಕ್ಷೆಗೆ ಒಳಪಡಿಸಬೇಕು ಎಂದು ತಿಳಿಸಿದ್ದಾರೆ.

ಅಲ್ಲದೇ ಚಿತ್ರ ಬಿಡುಗಡೆಗೂ ಮುನ್ನವೇ ಸೋರಿಕೆಯಾಗಿದ್ದರಿಂದ ನಟ ರಜಿನಿಕಾಂತ್ ಕೂಡ ಅಸಮಾಧಾನಗೊಂಡಿದ್ದಾರೆ. ಕಾಲಾ ಚಲನಚಿತ್ರ ಕೋಲಾರ, ಆಂಧ್ರ ಪ್ರದೇಶದ ಕೆಲವೆಡೆ ಹರಿದಾಡುತ್ತಿದೆ ಎನ್ನಲಾಗಿದೆ.

loader