ಈಗ ಚುನಾವಣೆ ನಡೆದರೆ ರಜನಿ ಪಕ್ಷಕ್ಕೆ 33 ಸ್ಥಾನ

news | Wednesday, January 17th, 2018
Suvarna Web Desk
Highlights

ನಟ ರಜನೀಕಾಂತ್ ಹೊಸ ಪಕ್ಷ ಸ್ಥಾಪಿಸುವುದಾಗಿ ಘೋಷಿಸಿ ಕೆಲ ದಿನಗಳಷ್ಟೇ ಆಗಿವೆ. ಒಂದು ವೇಳೆ ತಮಿಳುನಾಡಿನಲ್ಲಿ ಈಗ ಚುನಾವಣೆ ನಡೆದರೆ 234 ಸದಸ್ಯರ ವಿಧಾನಸಭೆಯಲ್ಲಿ ರಜನೀಕಾಂತ್ ಅವರ ಪಕ್ಷ 33 ಸ್ಥಾನಗಳನ್ನು ಗೆಲ್ಲುವ ಮೂಲಕ ಮೂರನೇ ಸ್ಥಾನ ಪಡೆಯಲಿದೆ.

ಚೆನ್ನೈ: ನಟ ರಜನೀಕಾಂತ್ ಹೊಸ ಪಕ್ಷ ಸ್ಥಾಪಿಸುವುದಾಗಿ ಘೋಷಿಸಿ ಕೆಲ ದಿನಗಳಷ್ಟೇ ಆಗಿವೆ. ಒಂದು ವೇಳೆ ತಮಿಳುನಾಡಿನಲ್ಲಿ ಈಗ ಚುನಾವಣೆ ನಡೆದರೆ 234 ಸದಸ್ಯರ ವಿಧಾನಸಭೆಯಲ್ಲಿ ರಜನೀಕಾಂತ್ ಅವರ ಪಕ್ಷ 33 ಸ್ಥಾನಗಳನ್ನು ಗೆಲ್ಲುವ ಮೂಲಕ ಮೂರನೇ ಸ್ಥಾನ ಪಡೆಯಲಿದೆ. ಜಯಲಲಿತಾ ನಿಧನದ ಬಳಿಕ ಆಂತರಿಕ ಕಲಹದಲ್ಲಿ ಮುಳುಗಿರುವ ಎಐಎಡಿಎಂಕೆ ಕೇವಲ 68 ಸ್ಥಾನಗಳನ್ನಷ್ಟೇ ಪಡೆಯಲಿದೆ.

ಡಿಎಂಕೆ 130 ಸ್ಥಾನಗಳನ್ನು ಪಡೆದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಇಂಡಿಯಾ ಟುಡೇ- ಕಾರ್ವೆ ನಡೆಸಿದ ಸಮೀಕ್ಷೆ ಭವಿಷ್ಯ ನುಡಿದಿದೆ. ರಜನೀಕಾಂತ್ ತಮ್ಮ ಪಕ್ಷದ ಹೆಸರನ್ನು ಇನ್ನೂ ಬಹಿರಂಗ ಪಡಿಸದೇ ಇದ್ದರೂ, ಚಲಾವಣೆಯಾಗುವ ಮತಗಳ ಪೈಕಿ ಶೇ.16ರಷ್ಟು ಮತಗಳನ್ನು ಪಡೆಯಲಿದ್ದಾರೆ.

ಜೊತೆಗೆ ರಜನೀಕಾಂತ್ ರಾಜಕೀಯದಲ್ಲಿ ಯಶಸ್ವಿಯಾಗಲಿದ್ದಾರೆ ಎಂದು ಶೇ.53 ಜನ ಹೇಳಿದ್ದಾರೆ. ಆದರೆ, ರಜನೀಕಾಂತ್ ಅವರ ತಮಿಳೇತರ ಮೂಲ ತಮಿಳುನಾಡು ರಾಜಕಾರಣದಲ್ಲಿ ಅವರ ವಿರುದ್ಧ ಕೆಲಸಮಾಡಬಹುದು ಎಂದು ಸಮೀಕ್ಷೆ ಹೇಳಿದೆ. ಈಗಲೇ ಚುನಾವಣೆ ನಡೆದರೆ ಎಐಎಡಿಎಂಕೆ ನೆಲಕಚ್ಚಲಿದ್ದು, ಡಿಎಂಕೆ ಅಧಿಕಾರ ಹಿಡಿಯಲಿದೆ. ಡಿಎಂಕೆ ಮುಖಂಡ ಎಂ.ಕೆ. ಸ್ಟಾಲಿನ್ ಮುಖ್ಯಮಂತ್ರಿ ಹುದ್ದೆಗೆ ಸೂಕ್ತ ವ್ಯಕ್ತಿ ಎಂದು ಜನರು ಅಭಿಪ್ರಾಯಪಟ್ಟಿದ್ದಾರೆ. 

Comments 0
Add Comment