ಹಲವು ಹೊತ್ತು ನಡೆದ ಈ ಭೇಟಿ ವೇಳೆ ರಜಿನೀಕಾಂತ್ ಮತ್ತು ಕರುಣಾನಿಧಿ ಮಧ್ಯೆ ಯಾವುದೇ ರಾಜಕೀಯ ವಿಚಾರ ಚರ್ಚೆಯಾಗಿಲ್ಲವೆನ್ನಲಾಗಿದೆ.
ಚೆನ್ನೈ(ಡಿ. 11): ಮಾಜಿ ಸಿಎಂ ಹಾಗೂ ಡಿಎಂಕೆ ಮುಖ್ಯಸ್ಥ ಎಂ.ಕರುಣಾನಿಧಿಯವರನ್ನು ನಟ ರಜನೀಕಾಂತ್ ಅವರನ್ನು ಭಾನುವಾರ ಭೇಟಿಯಾಗಿದ್ದಾರೆ. ಗೋಪಾಲಪುರಂನಲ್ಲಿನ ಕರುಣಾನಿಧಿ ನಿವಾಸಕ್ಕೆ ಭೇಟಿಯಿತ್ತ ರಜನೀಕಾಂತ್, ಡಿಎಂಕೆ ಮುಖ್ಯಸ್ಥರ ಆರೋಗ್ಯ ವಿಚಾರಿಸಿದ್ದಾರೆ. ಮಾಧ್ಯಮಕ್ಕೆ ಸಿಕ್ಕ ಮಾಹಿತಿ ಪ್ರಕಾರ, ಹಲವು ಹೊತ್ತು ನಡೆದ ಈ ಭೇಟಿ ವೇಳೆ ರಜಿನೀಕಾಂತ್ ಮತ್ತು ಕರುಣಾನಿಧಿ ಮಧ್ಯೆ ಯಾವುದೇ ರಾಜಕೀಯ ವಿಚಾರ ಚರ್ಚೆಯಾಗಿಲ್ಲವೆನ್ನಲಾಗಿದೆ.
93 ವರ್ಷದ ಕರುಣಾನಿಧಿಯವರು ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಡಿಸೆಂಬರ್ 1ರಂದು ಅವರನ್ನು ಕಾವೇರಿ ಆಸ್ಪತ್ರೆಗೂ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಪಕ್ಷದ ಕಾರ್ಯಕರ್ತರಿಗೂ ಅವರನ್ನು ಆಸ್ಪತ್ರೆಯಲ್ಲಿ ಭೇಟಿಯಾಗುವ ಅವಕಾಶವಿರಲಿಲ್ಲ. ಇದೀಗ, ಅವರ ಆರೋಗ್ಯ ಸುಧಾರಿಸಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಆಸ್ಪತ್ರೆಯಿಂದ ಡಿಸ್'ಚಾರ್ಜ್ ಆಗಿರುವ ಕರುಣಾನಿಧಿ ತಮ್ಮ ನಿವಾಸದಲ್ಲೇ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾರೆ.
