ಸಾಧುಸಂತರಿಗೆ ರಜನಿಕಾಂತ್ ಭೋಜನದ ವ್ಯವಸ್ಥೆ

First Published 15, Mar 2018, 10:36 PM IST
Rajinikanth meets holy men at Swami Dayanand Ashram in Rishikesh
Highlights

ರಾಜಕೀಯ ದೂರದೃಷ್ಟಿಯಿಂದ ಸೂಪರ್​​ಸ್ಟಾರ್​​​ ರಜನಿ ಹಿಮಾಲಯಕ್ಕೆ ಯಾತ್ರೆ ಕೈಗೊಂಡಿದ್ದಾರೆ ಎನ್ನಲಾಗುತ್ತಿದೆ. ದರೆ, ಇದೊಂದು ಧ್ಯಾತ್ಮಿಕ ಯಾತ್ರೆ ಎಂದು ರಜನಿಕಾಂತ್​ ಸ್ಪಷ್ಟಿಕರಿಸಿದ್ದಾರೆ. 

ಕಾಲಿವುಡ್​​​​​ ಸೂಪರ್​​ಸ್ಟಾರ್​​​ ರಜನಿಕಾಂತ್​​​ ಏನೇ ಮಾಡಿದ್ರೂ ಸುದ್ದಿಯಾಗುತ್ತಾರೆ.  ಹೃಷಿಕೇಶ್​​​ನಲ್ಲಿ ರಜನಿಕಾಂತ್​​ ಸಾಧುಸಂತರಿಗೆ ಭೋಜನದ ವ್ಯವಸ್ಥೆ ಮಾಡಿ ತಾನೊಬ್ಬ ದೈವಭಕ್ತ ಎಂಬುವುದನ್ನ ರುಜುವಾತು ಮಾಡಿದ್ದಾರೆ.

ಹಿಮಾಲಯ ಯಾತ್ರೆಯಲ್ಲಿರುವ ಸೂಪರ್​ಸ್ಟಾರ್​ ರಜನಿಕಾಂತ್​​ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಉತ್ತರಾಖಂಡ್​ನ ಹೃಷಿಕೇಶ​ದ ದಯಾನಂದ ಆಶ್ರಮದಲ್ಲಿ ನೂರಾರು ಸಾಧುಸಂತರಿಗೆ ​ಭೋಜನದ ವ್ಯವಸ್ಥೆ ಮಾಡಿದ್ದರು. ಅಲ್ಲದೇ ಸಾಧುಸಂತರಿಗೆ ಉಡುಗೆಗಳನ್ನ ನೀಡಿ ಅವರಿಂದ ಆಶೀರ್ವಾದ ಪಡೆದರು.

ರಾಜಕೀಯ ದೂರದೃಷ್ಟಿಯಿಂದ ಸೂಪರ್​​ಸ್ಟಾರ್​​​ ರಜನಿ ಹಿಮಾಲಯಕ್ಕೆ ಯಾತ್ರೆ ಕೈಗೊಂಡಿದ್ದಾರೆ ಎನ್ನಲಾಗುತ್ತಿದೆ. ಆದರೆ, ಇದೊಂದು ಅಧ್ಯಾತ್ಮಿಕ ಯಾತ್ರೆ ಎಂದು ರಜನಿಕಾಂತ್​ ಸ್ಪಷ್ಟಿಕರಿಸಿದ್ದಾರೆ.  ರಾಜಕೀಯ ವಿಚಾರಗಳನ್ನು ಮಾತನಾಡಲು ನಾನು ಇಲ್ಲಿಗೆ ಬಂದಿಲ್ಲ. ಪ್ರತಿವರ್ಷ ಹಿಮಾಲಯಕ್ಕೆ ಬಂದು ಹೋಗುತ್ತೇನೆ. ಅಲ್ಲದೇ ಮನಃಶಾಂತಿ ಬಯಸಿ ಇಲ್ಲಿಗೆ ಬರುತ್ತೇನೆ ಎಂದಿದ್ದಾರೆ.

ಅತ್ತ ರಜನಿಕಾಂತ್​​ ಸಾಧುಸಂತರಿಗೆ ಭೋಜನ ವ್ಯವಸ್ಥೆ, ಯಾತ್ರೆಯಲ್ಲಿ ಬ್ಯುಸಿಯಾಗಿದ್ರೆ, ಇತ್ತ ಮಧುರೈನಲ್ಲಿ ಟಿಟಿವಿ ದಿನಕರನ್​   ಹೊಸ ಪಕ್ಷವನ್ನು ಘೋಷಿಸಿದ್ದಾರೆ.  ‘ಅಮ್ಮ ಮಕ್ಕಳ್​​ ಮುನ್ನೇತ್ರ ಕಳಗಂ’ ಎಂದು ನಾಮಕರಣ ಮಾಡಿದ್ದಾರೆ. ಒಟ್ಟಾರೆ ತಮಿಳುನಾಡಿನ ರಾಜಕೀಯದಲ್ಲಿ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ..

loader