ತಲೈವಾ ರಾಜಕೀಯಕ್ಕೆ ಯಾವಾಗ ಬರುತ್ತಾರೆ? ಬಿಜೆಪಿ ಪಕ್ಷ ಸೇರ್ತಾರ ಅಥವಾ ಹೊಸ ಪಕ್ಷ ಕಟ್ಟುತ್ತಾರಾ? ಈ ಎಲ್ಲ ಪ್ರಶ್ನೆಗಳಿಗೆ ಶೀಘ್ರದಲ್ಲೇ ಉತ್ತರ ಸಿಗಲಿದೆ. ಯಾಕೆಂದರೆ ರಾಜಕೀಯಕ್ಕೆ ಬರಲು ರಜನಿಕಾಂತ್ ಚಿಂತಿಸಿದ್ದು, ಹುಟ್ಟುಹಬ್ಬದಂದು ಹೊಸ ಪಕ್ಷ ಘೋಷಣೆ ಮಾಡಲಿದ್ದಾರೆ.  ಸ್ಟೈಲ್ ಕಿಂಗ್, ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯಕ್ಕೆ ಯಾವಾಗ ಬರ್ತಾರೆ ಎಂಬುದಕ್ಕೆ ಸದ್ಯದಲ್ಲೇ ಉತ್ತರ ಸಿಗಲಿದೆ.

ಚೆನ್ನೈ(ಮೇ.17): ತಲೈವಾ ರಾಜಕೀಯಕ್ಕೆ ಯಾವಾಗ ಬರುತ್ತಾರೆ? ಬಿಜೆಪಿ ಪಕ್ಷ ಸೇರ್ತಾರ ಅಥವಾ ಹೊಸ ಪಕ್ಷ ಕಟ್ಟುತ್ತಾರಾ? ಈ ಎಲ್ಲ ಪ್ರಶ್ನೆಗಳಿಗೆ ಶೀಘ್ರದಲ್ಲೇ ಉತ್ತರ ಸಿಗಲಿದೆ. ಯಾಕೆಂದರೆ ರಾಜಕೀಯಕ್ಕೆ ಬರಲು ರಜನಿಕಾಂತ್ ಚಿಂತಿಸಿದ್ದು, ಹುಟ್ಟುಹಬ್ಬದಂದು ಹೊಸ ಪಕ್ಷ ಘೋಷಣೆ ಮಾಡಲಿದ್ದಾರೆ. ಸ್ಟೈಲ್ ಕಿಂಗ್, ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯಕ್ಕೆ ಯಾವಾಗ ಬರ್ತಾರೆ ಎಂಬುದಕ್ಕೆ ಸದ್ಯದಲ್ಲೇ ಉತ್ತರ ಸಿಗಲಿದೆ.

ತಲೈವಾ ಮೇನಿಯಾ: ರಾಜಕೀಯಕ್ಕೆ ಬರಲು ರಜನಿಕಾಂತ್ ನಿರ್ಧಾರ

ಸೂಪರ್ ಸ್ಟಾರ್ ರಜನಿಕಾಂತ್, ರಾಜಕೀಯಕ್ಕೆ ಬರಲು ಚಿಂತನೆ ನಡೆಸಿದ್ದಾರೆ. ಜಯಲಲಿತಾ ನಿಧನ ನಂತರ ತಮಿಳುನಾಡಿನಲ್ಲಿ ಸಮರ್ಥ ನಾಯಕತ್ವದ ಕೊರತೆ ಎದುರಾಗಿದೆ. ಜೊತೆಗೆ ಪ್ರಸಕ್ತ ರಾಜಕೀಯ ವಿದ್ಯಮಾನಗಳಿಂದ ಬೇಸತ್ತಿರುವ ರಜನಿಕಾಂತ್ ಭ್ರಷ್ಟಚಾರರಹಿತ ಆಡಳಿತ ನೀಡುವ ನಿಟ್ಟಿನಲ್ಲಿ ರಾಜಕೀಯಕ್ಕೆ ಬರಲು ನಿರ್ಧರಿಸಿದ್ದಾರೆ. ಈ ಸಂಬಂಧ ಆಪ್ತರು, ರಾಜಕೀಯ ವಿಶ್ಲೇಷಕರ ಜೊತೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಹುಟ್ಟುಹಬ್ಬ ದಿನದಂದು, ಅಂದರೆ ಡಿಸೆಂಬರ್ 12 ರಂದು ಹೊಸ ಪಕ್ಷ ಘೋಷಣೆ ಮಾಡುವ ಸಾಧ್ಯತೆಯಿದೆ ಎನ್ನಲಾಗ್ತಿದೆ. ಬಿಜೆಪಿ ಕಾರ್ಯಕರ್ತರು ಕಳೆದೆರಡು ದಿನಗಳಿಂದ ರಜನಿಕಾಂತ್ ಅವ್ರನ್ನು ಭೇಟಿ ಮಾಡಿ ಬಿಜೆಪಿಗೆ ಸೇರುವಂತೆ ಆಹ್ವಾನಿಸಿದ್ದಾರಂತೆ. ಆದ್ರೆ ರಜನಿಕಾಂತ್ ಈ ಬಗ್ಗೆ ಯಾವುದೇ ಸ್ಪಷ್ಟ ನಿಲುವು ತಿಳಿಸಿಲ್ಲ.

1996ರಲ್ಲಿ ದಿವಂಗತ ಮಾಜಿ ಮುಖ್ಯಮಂತ್ರಿ ಜಯಲಲಿತಾ ವಿರುದ್ಧ ರಜನಿಕಾಂತ್ ಒಂದು ಹೇಳಿಕೆ ನೀಡಿದ್ದರು. ಆ ಹೇಳಿಕೆ ಎಐಎಡಿಎಂಕೆ ಪಕ್ಷಕ್ಕೆ ಎಂತ ಪೆಟ್ಟು ನೀಡಿತ್ತೆಂದರೆ, ಆ ಚುನಾವಣೆಯಲ್ಲಿ ಎಐಎಡಿಎಂಕೆ ಹೀನಾಯವಾಗಿ ಸೋತಿತ್ತು. ಡಿಎಂಕೆ-ಟಿಎಂಸಿ ಜಯಭೇರಿ ಬಾರಿಸಿತ್ತು. ಅಷ್ಟರ ಮಟ್ಟಿಗೆ ರಜನಿಕಾಂತ್ ನೀಡುವ ಹೇಳಿಕೆ ರಾಜಕೀಯದಲ್ಲಿ ಪರಿಣಾಮ ಬೀರುತ್ತದೆ. ಅಪಾರ ಅಭಿಮಾನಿಗಳನ್ನು ಹೊಂದಿರುವ ರಜನಿ, ಅಧಿಕಾರಕ್ಕೆ ಬಂದ್ರೆ ಉತ್ತಮ ಆಡಳಿತ ನೀಡೇ ನೀಡುತ್ತಾರೆ ಎಂಬ ಭರವಸೆ ಬಿಜೆಪಿಗೆ ಮಾತ್ರವಲ್ಲ ಕಾಂಗ್ರೆಸ್‌'ಗೂ ಇದೆ. ಹೀಗಾಗಿಯೇ ಎಲ್ಲಾ ಪಕ್ಷಗಳು ರಜನಿಕಾಂತ್ ಬೆನ್ನು ಬಿದ್ದಿವೆ. ಅದೇನೆ ಇರಲಿ ರಜನಿಕಾಂತ್ ರಾಜಕೀಯಕ್ಕೆ ಬರ್ತಾರಾ? ಇಲ್ವಾ ಎಂಬುದು ಮುಂದಿನ ವರ್ಷದೊಳಗೆ ಗೊತ್ತಾಗಲಿದೆ.