ರಜನಿಕಾಂತ್ ನೂತನ ಪಕ್ಷದ ಲೋಗೋ ಆಯಪ್​, ವೆಬ್​ಸೈಟ್​ ಆರಂಭವಾಗಿದೆ. ‘ಬಾಬಾ’ ಚಿತ್ರದ ಬೆರಳಿನ ಸಂಕೇತದ ಲೋಗೋ ಬಿಡುಗಡೆ ಮಾಡಿದ್ದಾರೆ.  rajinimandram.org' ವೆಬ್​ಸೈಟ್​'ನ್ನು ಆರಂಭಿಸಿದ್ದಾರೆ.

ಚೆನ್ನೈ (ಜ.01): ರಜನಿಕಾಂತ್ ನೂತನ ಪಕ್ಷದ ಲೋಗೋ ಆಯಪ್​, ವೆಬ್​ಸೈಟ್​ ಆರಂಭವಾಗಿದೆ. ‘ಬಾಬಾ’ ಚಿತ್ರದ ಬೆರಳಿನ ಸಂಕೇತದ ಲೋಗೋ ಬಿಡುಗಡೆ ಮಾಡಿದ್ದಾರೆ. rajinimandram.org' ವೆಬ್​ಸೈಟ್​'ನ್ನು ಆರಂಭಿಸಿದ್ದಾರೆ.

ಪಕ್ಷ ಸೇರಲು ಇಚ್ಛಿಸುವರು ವೆಬ್​ಸೈಟ್​ನಲ್ಲಿ ಹೆಸರು ನೋಂದಾಯಿಸಲು ಜನರಿಗೆ ರಜನೀಕಾಂತ್ ಆಹ್ವಾನ ನೀಡಿದ್ದಾರೆ.

"ಜನರ ಆಶಯದಂತೆ ತಮಿಳುನಾಡು ರಾಜಕಾರಣವನ್ನು ಸ್ವಚ್ಛಗೊಳಿಸಬೇಕಿದೆ. ನಾವೆಲ್ಲಾ ಸೇರಿ ಹೊಸ ಬದಲಾವಣೆ ತರೋಣ. ತಮಿಳುನಾಡು ಅಭಿವೃದ್ಧಿಗೆ ನೀವೆಲ್ಲರೂ ಕೈಜೋಡಿಸಿ. ನಮ್ಮ ವೆಬ್'ಸೈಟ್'ನಲ್ಲಿ ನಿಮ್ಮ ಹೆಸರು, ವಿಳಾಸ, ವೋಟರ್ ಐಡಿ ನಂಬರನ್ನು ನೊಂದಾಯಿಸಿ" ಎಂದು ತಮಿಳುನಾಡು ಜನರನ್ನು ಉದ್ದೇಶಿಸಿ ರಜನಿಕಾಂತ್ ಮನವಿ ಮಾಡಿದ್ದಾರೆ.