ತಮಿಳುನಾಡಿನಲ್ಲಿ ರಾಜಕೀಯ ಪ್ರವೇಶಕ್ಕೆ ತುದಿಗಾಲಲ್ಲಿ ನಿಂತಿರುವ ಸೂಪರ್‌ಸ್ಟಾರ್‌ ರಜನೀಕಾಂತ್‌ ಅವರು, ತಮ್ಮ ಟ್ವೀಟರ್‌ ಖಾತೆಯಲ್ಲಿನ ಸೂಪರ್‌ಸ್ಟಾರ್‌ ಟ್ಯಾಗ್‌ ಅನ್ನು ಅಳಿಸಿ ಹಾಕಿದ್ದಾರೆ.
ಚೆನ್ನೈ: ತಮಿಳುನಾಡಿನಲ್ಲಿ ರಾಜಕೀಯ ಪ್ರವೇಶಕ್ಕೆ ತುದಿಗಾಲಲ್ಲಿ ನಿಂತಿರುವ ಸೂಪರ್ಸ್ಟಾರ್ ರಜನೀಕಾಂತ್ ಅವರು, ತಮ್ಮ ಟ್ವೀಟರ್ ಖಾತೆಯಲ್ಲಿನ ಸೂಪರ್ಸ್ಟಾರ್ ಟ್ಯಾಗ್ ಅನ್ನು ಅಳಿಸಿ ಹಾಕಿದ್ದಾರೆ.
ಹಾಗಾಗಿ, ಇದೀಗ ಅವರ ಅಧಿಕೃತ ಟ್ವೀಟರ್ ಖಾತೆ ಕೇವಲ ರಜನೀಕಾಂತ್ ಆಗಿ ಬದಲಾಗಿದೆ. ಇದರಿಂದ ರಜನೀಕಾಂತ್ ಅವರನ್ನು ಸೂಪರ್ ಸ್ಟಾರ್ ಎಂದು ಆರಾಧಿಸುತ್ತಿದ್ದ ಅವರ ಅಭಿಮಾನಿಗಳಲ್ಲಿ ಇದು ತುಸು ನಿರಾಸೆ ತರಿಸಿರಬಹುದು.
ಆದರೆ, ರಾಜಕೀಯದಲ್ಲಿ ಯಶಸ್ಸು ಸಾಧಿಸಬೇಕು ಎಂಬ ಮಹತ್ವಾಕಾಂಕ್ಷೆಯಲ್ಲಿರುವ ರಜನೀಕಾಂತ್ ಸೂಪರ್ಸ್ಟಾರ್ ಎಂಬ ಹಣೆಪಟ್ಟಿಯಿಂದ ಅಂತರ ಕಾಯ್ದುಕೊಳ್ಳಲು ನಿರ್ಧರಿಸಿದ್ದಾರೆ. ಈ ಮೂಲಕ ತಾನು ಸಹ ಸಾಮಾನ್ಯ ನಾಗರಿಕ ಎಂಬುದನ್ನು ಜನರಿಗೆ ಮನದಟ್ಟು ಮಾಡುವ ಯತ್ನ ಮಾಡಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.
