ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆ ಯೋಜನೆ ಸ್ವಚ್ಚ ಭಾರತ್ ಯೋಜನೆಗೆ ಸೂಪರ್’ಸ್ಟಾರ್ ರಜನೀಕಾಂತ್ ಫುಲ್ ಸಪೋರ್ಟ್ ನೀಡಿದ್ದಾರೆ.  

ನವದೆಹಲಿ (ಸೆ.22): ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆ ಯೋಜನೆ ಸ್ವಚ್ಚ ಭಾರತ್ ಯೋಜನೆಗೆ ಸೂಪರ್’ಸ್ಟಾರ್ ರಜನೀಕಾಂತ್ ಫುಲ್ ಸಪೋರ್ಟ್ ನೀಡಿದ್ದಾರೆ.

ಪ್ರಧಾನಿ ಮೋದಿಯವರು ಉದ್ಯಮಿಗಳು, ಸೆಲೆಬ್ರಿಟಿಗಳಿಗೆ ವೈಯಕ್ತಿಕವಾಗಿ ಪತ್ರ ಬರೆದು ಸ್ವಚ್ಚ ಭಾರತ ಯೋಜನೆಗೆ ಬೆಂಬಲ ನೀಡಿ ಹಾಗೂ ಮುಂದಾಗಿ ಎಂದು ಕೇಳಿಕೊಂಡಿದ್ದರು. ಮಹಾತ್ಮ ಗಾಂಧೀಯವರ ನಂಬಿಕೆಯಾದ ಸ್ವಚ್ಚತೆಯಲ್ಲಿ ಎಲ್ಲರೂ ಭಾಗವಹಿಸಬೇಕು ಎಂದು ಪತ್ರದಲ್ಲಿ ಹೇಳಿದ್ದರು. ಈ ಹಿನ್ನಲೆಯಲ್ಲಿ ರಜನೀಕಾಂತ್ ಇಂದು ಬೆಂಬಲ ಸೂಚಿಸಿದ್ದಾರೆ.

ಸೆ. 15 ರಿಂದ ಗಾಂಧಿ ಜಯಂತಿವರೆಗೆ ‘ಸ್ವಚ್ಚತಾ ಹೇ ಸೇವಾ’ ಆಚರಿಸಲಾಗುತ್ತದೆ. ಇದಕ್ಕೆ ರಜನೀಕಾಂತ್ ಸೇರಿದಂತೆ ಅಕ್ಷಯ್ ಕುಮಾರ್, ಅನುಷ್ಕಾ ಶರ್ಮಾ, ಸಚಿನ್ ತೆಂಡೂಲ್ಕರ್ ಬೆಂಬಲ ಸೂಚಿಸಿದ್ದಾರೆ.