ಈ ಚಿತ್ರದ ಮೂಲಕ ರಜನೀಕಾಂತ್ ಅವರು ತಮ್ಮ ಚಿತ್ರಕ್ಕೆ 1 ಕೋಟಿಗೂ ಅಧಿಕ ಸಂಭಾವನೆ ಪಡೆಯಲು ಆರಂಭಿಸಿದ್ದರು.

ಚೆನ್ನೈ(ಮಾ.03): 1995ರಲ್ಲಿ ತೆರೆಕಂಡ ರಜನೀಕಾಂತ್ ಅವರ ಸೂಪರ್ ಹಿಟ್ ಬಾಷಾ ಚಿತ್ರ 22 ವರ್ಷಗಳ ಬಳಿಕ ಮರು ಬಿಡುಗಡೆಗೊಂಡಿದೆ. ಈ ಚಿತ್ರದ ಮೂಲಕ ರಜನೀಕಾಂತ್ ಅವರು ತಮ್ಮ ಚಿತ್ರಕ್ಕೆ 1 ಕೋಟಿಗೂ ಅಧಿಕ ಸಂಭಾವನೆ ಪಡೆಯಲು ಆರಂಭಿಸಿದ್ದರು. ಎರಡು ದಶಕಗಳಲ್ಲಿ ರಜನೀಕಾಂತ್ ಏಳು ಬ್ಲಾಕ್ ಬಾಸ್ಟರ್ ಚಿತ್ರಗಳನ್ನು ನೀಡಿದ್ದಾರೆ. ಆದರೆ ಬಾಷಾ ಚಿತ್ರದ ದಾಖಲೆಯನ್ನು ಅವರ ಯಾವ ಚಿತ್ರವೂ ಮುರಿದಿಲ್ಲ. ಸುರೇಶ್ ಕೃಷ್ಣ ನಿರ್ದೇಶನದ ಈ ಚಿತ್ರವನ್ನು ಡಿಜಿಟಲ್ ಫಾರ್ಮೆಟ್‌ನಲ್ಲಿ ಮತ್ತೊಮ್ಮೆ ಬಿಡುಗಡೆ ಮಾಡಲಾಗಿದ್ದು, ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.