ಸ್ಟೀಲ್ ಫ್ಲೈಓವರ್ ಬೇಡ ಎನ್ನುವವರು ಮಾತನಾಡಲೇಬಾರದಾ..?ಹಾಗಾದರೆ, ಸಭೆ ಕರೆದು ಮಾಹಿತಿ ನೀಡುತ್ತೇನೆ ಎಂದ ಔಚಿತ್ಯವಾದರೂ ಏನು..?

ಬೆಂಗಳೂರು(ಅ. 25): ಸ್ಟೀಲ್ ಬ್ರಿಜ್ ನಿರ್ಮಾಣದ ವಿಚಾರದಲ್ಲಿ ಸರಕಾರ ಸಂಪೂರ್ಣ ಹಠಕ್ಕೆ ಬಿದ್ದಿರುವುದಕ್ಕೆ ಇನ್ನೊಂದು ಸಾಕ್ಷ್ಯ ಸಿಕ್ಕಿದೆ. ಉಕ್ಕಿನ ಸೇತುವೆ ಯೋಜನೆ ವಿಚಾರವಾಗಿ ಮಾಹಿತಿ ಕೊಡಲು ಇಂದು ಕರೆದಿದ್ದ ಸಭೆಯಲ್ಲಿ ರಾಜೀವ್ ಚಂದ್ರಶೇಖರ್'ಗೆ ಮಾತನಾಡಲು ಸಚಿವ ಕೆ.ಜೆ.ಜಾರ್ಜ್ ಅವಕಾಶ ನಿರಾಕರಿಸಿದ ಘಟನೆ ನಡೆದಿದೆ. ಯೋಜನೆ ವಿರುದ್ಧ ಯಾವುದೇ ಧ್ವನಿ ಎತ್ತಬಾರದು ಎಂದಿದ್ದರೆ ಸಭೆಗೆ ಯಾಕೆ ಆಹ್ವಾನ ನೀಡಬೇಕಿತ್ತು ಎಂಬ ಪ್ರಶ್ನೆ ಸಹಜವಾಗಿಯೇ ಏಳುತ್ತದೆ. ರಾಜೀವ್ ಚಂದ್ರಶೇಖರ್'ಗೆ ಮಾತನಾಡಲು ಅವಕಾಶ ನೀಡದ ಜಾರ್ಜ್ ಅವರ ಕ್ರಮವನ್ನು ವಿರೋಧಿಸಿ ಬಿಜೆಪಿ ಮುಖಂಡರು ಸಭೆಯನ್ನೇ ಬಹಿಷ್ಕರಿಸಿದರು. ಉಕ್ಕಿನ ಸೇತುವೆ ಯೋಜನೆ ವಿರುದ್ಧ ಸಂಸದ ರಾಜೀವ್ ಚಂದ್ರಶೇಖರ್ ಅವರು ಮೊದಲಿನಿಂದಲೂ ಸಮರ ಸಾರುತ್ತಾ ಬಂದಿದ್ದಾರೆ. ಇದೀಗ ಈ ಯೋಜನೆ ವಿರುದ್ಧ ಅವರು ಹೈಕೋರ್ಟ್ ಮೊರೆ ಕೂಡ ಹೋಗಿದ್ದಾರೆ.

ಸಚಿವ ಜಾರ್ಜ್'ಗೆ ಸುವರ್ಣನ್ಯೂಸ್ ಪ್ರಶ್ನೆಗಳು:
ಸ್ಟೀಲ್ ಫ್ಲೈಓವರ್ ಬೇಡ ಎನ್ನುವವರು ಮಾತನಾಡಲೇಬಾರದಾ..?
ಹಾಗಾದರೆ, ಸಭೆ ಕರೆದು ಮಾಹಿತಿ ನೀಡುತ್ತೇನೆ ಎಂದ ಔಚಿತ್ಯವಾದರೂ ಏನು..?
ಯೋಜನೆಯನ್ನು ಪ್ರಶ್ನಿಸಿದವರಿಗಲ್ಲದೆ, ಇನ್ಯಾರಿಗೆ ಮಾಹಿತಿ ಕೊಡುತ್ತೀರಿ..?
ನಿಮ್ಮ ವಾದವನ್ನಷ್ಟೇ ಹೇಳೋಕೆ ಈ ಸಭೆ ಕರೆಯಬೇಕಿತ್ತಾ..?
ಸ್ಟೀಲ್ ಫ್ಲೈಓವರ್ ಏಕೆ ಬೇಡ ಎಂಬುದನ್ನು ಕೇಳುವ ಸೌಜನ್ಯವೂ ಇಲ್ಲವಾ..?
ಅವಸರದ ಯೋಜನೆಯ ಮಾಹಿತಿಯನ್ನು ಗುಟ್ಟಾಗಿಟ್ಟಿರುವುದು ಏಕೆ..?