ಸಮಾರಂಭದಲ್ಲಿ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್, ಸ್ಥಳೀಯ ಶಾಸಕ ವಿಜಯಕುಮಾರ್, ಸ್ಥಳೀಯ ಕಾರ್ಪೊರೇಟರ್ ಎನ್ ನಾಗರಾಜು ಸೇರಿದಂತೆ ಇನ್ನಿತರರು ಭಾಗಿಯಾಗಿದ್ದರು.

ಬೆಂಗಳೂರು(ಫೆ.12): ಎಸ್​ಎಸ್​ಎಲ್​ಸಿ ಪರೀಕ್ಷೆ ಹತ್ತಿರವಾಗ್ತಿದೆ. ಹೀಗಾಗಿ ಪ್ರತೀ ವರ್ಷವೂ ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳಿಗೆ ಜಯನಗರ ಶೈಕ್ಷಣಿಕ ಸಮಿತಿ ಉಚಿತ ತರಬೇತಿಯನ್ನು ನೀಡ್ತಿದೆ. ಕಳೆದ ಎಂಟು ವರ್ಷದಿಂದ ಉಚಿತ ತರಬೇತಿ ನೀಡುತ್ತಿರುವ ಸಮಿತಿಯ ಈ ವರ್ಷದ ಸಮಾರೋಪ ಸಮಾರಂಭ ಇಂದು ನಡೆಯಿತು. ಸಮಾರಂಭದಲ್ಲಿ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್, ಸ್ಥಳೀಯ ಶಾಸಕ ವಿಜಯಕುಮಾರ್, ಸ್ಥಳೀಯ ಕಾರ್ಪೊರೇಟರ್ ಎನ್ ನಾಗರಾಜು ಸೇರಿದಂತೆ ಇನ್ನಿತರರು ಭಾಗಿಯಾಗಿದ್ದರು. ಇದೇ ವೇಳೆ ಮಾತನಾಡಿದ ರಾಜೀವ್ ಚಂದ್ರಶೇಖರ್. ಎಸ್​ಎಸ್​ಎಲ್​ಸಿ ನಿಮ್ಮ ಭವಿಷ್ಯವನ್ನು ನಿರ್ಧರಿಸುವ ಘಟ್ಟ, ಹೀಗಾಗಿ ಹೆಚ್ಚು ಪರಿಶ್ರಮದಿಂದ ಉತ್ತಮ ಅಂಕ ಗಳಿಸಿ ಉನ್ನತ ಹಂತಕ್ಕೇರಬೇಕು. ಸಾಮಾಜಿಕ ಮಾಧ್ಯಮಗಳಿಂದ ದೂರವುಳಿದು ಪರೀಕ್ಷೆಗೆ ತಯಾರಿ ನಡೆಸಿ. ಯಾವುದು ಕಷ್ಟವಲ್ಲ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.