ಬಿಜೆಪಿ ಸರ್ಕಾರ ಜಾರಿಗೆ ತಂದ ನಿಯಮವೊಂದನ್ನು ಕಾಂಗ್ರೆಸ್ ಸರ್ಕಾರ ಬದಲಾಯಿಸಿದೆ.  ಪಂಚಾಯ್ತಿ ಹಾಗೂ ಇತರ ಸ್ಥಳೀಯಾಡಳಿತ ಚುನಾವಣೆಗಳಲ್ಲಿ ಸ್ಪರ್ಧಿಸಲು ಅಭ್ಯರ್ಥಿಗಳಿಗೆ ಇದ್ದ ಕನಿಷ್ಠ ವಿದ್ಯಾರ್ಹತೆ ಮಿತಿಯನ್ನು ತೆಗೆದು ಹಾಕಿ, ಪ್ರತಿ ಪ್ರಜೆಗೂ ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕಿದೆ ಎಂದು ಘೋಷಿಸಿದೆ. 

ಜೈಪುರ: ರಾಜಸ್ಥಾನದಲ್ಲಿ ನೂತನವಾಗಿ ಅಧಿಕಾರಕ್ಕೆ ಬಂದ ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರ ತನ್ನ ಮೊದಲ ಸಂಪುಟ ಸಭೆಯಲ್ಲಿ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಂಡಿದೆ. 

ಪಂಚಾಯ್ತಿ ಹಾಗೂ ಇತರ ಸ್ಥಳೀಯಾಡಳಿತ ಚುನಾವಣೆಗಳಲ್ಲಿ ಸ್ಪರ್ಧಿಸಲು ಅಭ್ಯರ್ಥಿಗಳಿಗೆ ಇದ್ದ ಕನಿಷ್ಠ ವಿದ್ಯಾರ್ಹತೆ ಮಿತಿಯನ್ನು ತೆಗೆದು ಹಾಕಿ, ಪ್ರತಿ ಪ್ರಜೆಗೂ ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕಿದೆ ಎಂದು ಘೋಷಿಸಿದೆ. 

ಹಿಂದಿನ ರಾಜೇ ಸರ್ಕಾರ ನಗರಾಡಳಿತ ಚುನಾವಣೆಗಳಿಗೆ 10 ನೇ ತರಗತಿ ಹಾಗೂ ಪಂಚಾಯ್ತಿ ಸರಪಂಚ ಚುನಾವಣೆಗಳಿಗೆ 8 ನೇ ತರಗತಿ, ಪಂಚಾಯ್ತಿ ಸದಸ್ಯ ಹಾಗೂ ಜಿಲ್ಲಾಪಂಚಾಯ್ತಿ ಚುನಾವಣೆಗೆ 10 ನೇ ತರಗತಿ ಕನಿಷ್ಠ ವಿದ್ಯಾರ್ಹತೆ ನಿಗದಿಮಾಡಿತ್ತು. ಇದೇ ವೇಳೆ, ಈಗಾಗಲೇ ಘೋಷಿಸಿರುವ ರೈತರ ಸಾಲ ಮನ್ನಾವನ್ನು ಕಾರ್ಯರೂಪಕ್ಕೆ ತರಲು ಸಮಿತಿ ರಚಿಸಲು ತೀರ್ಮಾನಿಸಲಾಗಿದೆ. 

ಅಂತೆಯೇ ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ದೀನದಯಾಳ ಉಪಾಧ್ಯಾಯ ಅವರ ಚಿತ್ರ ಇರುವ ಲೆಟರ್‌ಪ್ಯಾಡ್ (ಸಿಕ್ಕಾ)ಗಳನ್ನು ರದ್ದುಗೊಳಿಸಿ ಅಶೋಕಸ್ತಂಭ ಇರುವ ಲೆಟರ್‌ಪ್ಯಾಡ್ ಜಾರಿಗೆ ತರಲು ತೀರ್ಮಾನಿಸಿದೆ. ಇದೇ ವೇಳೆ, ರಾಜೇ ಸರ್ಕಾರವು ಶಿಕ್ಷಣದ ಕೇಸರೀಕರಣ ಮಾಡಿತ್ತು ಎಂದಿರುವ ಸರ್ಕಾರ ಪಠ್ಯಗಳಲ್ಲಿನ ‘ಕೇಸರಿ’ ಅಂಶಗಳನ್ನು ತೆಗೆದು ಹಾಕಲು ತೀರ್ಮಾನಿಸಿದೆ.