ಇತ್ತೀಚೆಗೆ ಬಿಜೆಪಿ ತೊರೆದಿರುವ ಬಿಜೆಪಿ ಹಿರಿಯ ನಾಯಕ ಮಗನಿಗೆ ಕಾಂಗ್ರೆಸ್ ಭರ್ಜರಿ ಆಫರ್ ನೀಡಿದೆ. ಯಾರು ನಾಯಕನ ಪುತ್ರ? ಕಾಂಗ್ರೆಸ್ ಆಫರ್ ನೀಡಿದ್ದಾದ್ರು ಏನು?

ಜೈಪುರ, (ನ.17): ಡಿಸೆಂಬರ್ ನಲ್ಲಿ ನಡೆಯಲಿರುವ ರಾಜಸ್ಥಾನ ವಿಧಾನಸಭೆ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಲೇ ಇದೆ.

Add Asianetnews Kannada as a Preferred SourcegooglePreferred

ಈ ನಡುವೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಬಿಜೆಪಿ ಹಿರಿಯ ನಾಯಕ ಜಸ್ವಂತ್ ಸಿಂಗ್ ಅವರ ಪುತ್ರನಿಗೆ ಕಾಂಗ್ರೆಸ್ ಭರ್ಜರಿ ಆಫರ್ ನೀಡಿದೆ.

ಬಿಜೆಪಿಗೆ ಬಿಗ್ ಶಾಕ್: ಪಕ್ಷ ತೊರೆದ ಫೇಮಸ್ ನಾಯಕ!

ಇಂದು [ಶನಿವಾರ] ಕಾಂಗ್ರೆಸ್ ಬಿಡುಗಡೆ ತನ್ನ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ ಮಾಡಿದ್ದು, ಹಾಲಿ ಮುಖ್ಯಮಂತ್ರಿ ಬಿಜೆಪಿಯ ವಸುಂಧರಾ ರಾಜೆ ಅವರ ವಿರುದ್ಧ ಕಾಂಗ್ರೆಸ್ ಬಿಜೆಪಿ ಹಿರಿಯ ನಾಯಕ ಜಸ್ವಂತ್ ಸಿಂಗ್ ಅವರ ಪುತ್ರ ಮನ್ವೇಂದ್ರ ಸಿಂಗ್ ಅವರನ್ನ ಕಣಕ್ಕಿಳಿಸಿದೆ.

ಜಲ್ರಾಪಟನ್ ವಿಧಾನಸಭಾ ಕ್ಷೇತ್ರದಿಂದ ವಸುಂಧರಾ ರಾಜೆ ಅವರು ಸ್ಪರ್ಧಿಸಿದ್ದು, ಇವರನ್ನ ಮಣಿಸಲು ಕಾಂಗ್ರೆಸ್ ಅಭ್ಯರ್ಥಿಯಾಗಿ ಮನ್ವೇಂದ್ರ ಸಿಂಗ್ ಅವರನ್ನು ಕಣಕ್ಕಿಳಿಸಿದೆ. ಅಷ್ಟೇ ಅಲ್ಲದೇ ಮನ್ವಿಂದರ್ ಸಿಂಗ್ ಅವರನ್ನ ಕಾಂಗ್ರೆಸ್ ಸಿಎಂ ಅಭ್ಯರ್ಥಿ ಎಂದು ಘೋಷಿಸಿದೆ.

ಇತ್ತೀಚೆಗಷ್ಟೇ ಬಿಜೆಪಿ ತೊರೆದು ಮನ್ವೇಂದ್ರ ಸಿಂಗ್ ಕಾಂಗ್ರೆಸ್ ಸೇರಿದ್ದರು. ಬಿಜೆಪಿಯ ಪ್ರಮುಖ ನಾಯಕರಲ್ಲೊಬ್ಬರಾಗಿದ್ದ ಮನ್ವೇಂದ್ರ ಸಿಂಗ್ ಚುನಾವಣೆ ಹೊಸ್ತಿಲಲ್ಲಿರುವಾಗ ಬಿಜೆಪಿ ತೊರೆದು ವಿಪಕ್ಷ ಕಾಂಗ್ರೆಸ್ ಅನ್ನು ಸೇರಿದ್ದು ಬಿಜೆಪಿಗೆ ಭಾರೀ ಹಿನ್ನಡೆಯನ್ನುಂಟು ಮಾಡಿತ್ತು.