ಕಾರ್ಮಿಕ ಇಲಾಖೆ ತನ್ನ ಸಿಬ್ಬಂದಿಗೆ ಜೀನ್ಸ್ ಮತ್ತು ಟೀ ಶರ್ಟ್‌ಗಳನ್ನು ಧರಿಸದಂತೆ ಸೂಚಿಸಿದ್ದು, ಭಾರೀ ವಿವಾದಕ್ಕೆ ಕಾರಣವಾಗಿದೆ. ಜೂ.21 ರಂದು ವಸ್ತ್ರ ಸಂಹಿತೆಯನ್ನು ಜಾರಿಗೊಳಿಸಿ ರಾಜಸ್ಥಾನ ಕಾರ್ಮಿಕ ಆಯುಕ್ತ ಗಿರಿರಾಜ್ ಸಿಂಗ್ ಕುಷ್ವಾಹಾ ಅವರು ಸುತ್ತೋಲೆ ಹೊರಡಿಸಿದ್ದಾರೆ.
ಜೈಪುರ: ರಾಜಸ್ಥಾನದ ಕಾರ್ಮಿಕ ಇಲಾಖೆ ತನ್ನ ಸಿಬ್ಬಂದಿಗೆ ಜೀನ್ಸ್ ಮತ್ತು ಟೀ ಶರ್ಟ್‌ಗಳನ್ನು ಧರಿಸದಂತೆ ಸೂಚಿಸಿದ್ದು, ಭಾರೀ ವಿವಾದಕ್ಕೆ ಕಾರಣವಾಗಿದೆ. ಜೂ.21 ರಂದು ವಸ್ತ್ರ ಸಂಹಿತೆಯನ್ನು ಜಾರಿಗೊಳಿಸಿ ಕಾರ್ಮಿಕ ಆಯುಕ್ತ ಗಿರಿರಾಜ್ ಸಿಂಗ್ ಕುಷ್ವಾಹಾ ಅವರು ಸುತ್ತೋಲೆ ಹೊರಡಿಸಿದ್ದಾರೆ.
ಕೆಲವು ಅಧಿಕಾರಿಗಳು ಹಾಗೂ ಸಿಬ್ಬಂದಿ ಜೀನ್ಸ್ ಧರಿಸಿ ಕಚೇರಿಗೆ ಆಗಮಿಸುತ್ತಿದ್ದಾರೆ. ಟೀ ಶರ್ಟ್ ಹಾಗೂ ಮತ್ತಿತರ ಅಸಭ್ಯ ಉಡುಗೆಗಳನ್ನು ತೊಡುತ್ತಿದ್ದಾರೆ. ಇದರಿಂದ ಇಲಾಖೆಯ ಘನತೆಗೆ ಧಕ್ಕೆ ಉಂಟಾಗಿದೆ.
ಹೀಗಾಗಿ ಸಿಬ್ಬಂದಿ ಪ್ಯಾಂಟ್ ಮತ್ತು ಶರ್ಟ್ ಧರಿಸಿ ಕಚೇರಿಗೆ ಆಗಮಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಈ ಆದೇಶಕ್ಕೆ ರಾಜ್ಯ ನೌಕರರ ಸಂಘಟನೆಯಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ.
