ಎನ್‌'ಜಿಒ ಒಂದು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಿಸಿದ ರಾಜಸ್ಥಾನ ಹೈಕೋರ್ಟ್ ನ್ಯಾಯಪೀಠ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿತು.
ಜೈಪುರ(ಡಿ.21): ಟೀವಿಗಳಲ್ಲಿ ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ಕಾಂಡೋಂ ಜಾಹೀರಾತು ಪ್ರಸಾರಕ್ಕೆ ನಿಷೇಧಿಸಿದ ನಿರ್ಧಾರಕ್ಕೆ ಕಾರಣ ಕೋರಿ ಕೇಂದ್ರ ಸರ್ಕಾರಕ್ಕೆ ರಾಜಸ್ಥಾನ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಎನ್'ಜಿಒ ಒಂದು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಿಸಿದ ರಾಜಸ್ಥಾನ ಹೈಕೋರ್ಟ್ ನ್ಯಾಯಪೀಠ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿತು.
ಮಕ್ಕಳು ನೋಡುವುದಕ್ಕೆ ಯೋಗ್ಯವಾಗಿಲ್ಲವಾದುದರಿಂದ, ಬೆಳಗ್ಗೆ 6ರಿಂದ ರಾತ್ರಿ 10ರ ವರೆಗೆ ಕಾಂಡೋಂ ಜಾಹೀರಾತುಗಳನ್ನು ನೀಡುವುದಕ್ಕೆ ನಿರ್ಬಂಧ ಹೇರಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಟೀವಿ ವಾಹಿನಿಗಳಿಗೆ ನಿರ್ದೇಶಿಸಿತ್ತು.
